ಪಾಲಿಕೆ ಚುನಾವಣೆ ಗೆದ್ದನಂತರ ಬಸವಾನಂದ ಅಜ್ಜಾರ ಆಶೀರ್ವಾದ ಪಡೆದ ಜೆಡಿಎಸ್ ಅಭ್ಯರ್ಥಿ... | Dharwad |
ಅವಳಿನಗರ ಪಾಲಿಕೆ ಚುನಾವಣೆ ರಣರಂಗದ ಅಖಾಡ ನಿನ್ನೆ ಫಲಿತಾಂಶ ಹೊರಬಿದ್ದ ನಂತರ ಗೆದ್ದ ಅಭ್ಯರ್ಥಿಗಳ ಬೆಂಬಲಿಗರ ಸಂತೋಷ ಮುಗಿಲು ಮುಟ್ಟಿತ್ತು. ಅದ್ರಂತೆ ವಾಡ್೯ನಂಬರ್ 25,ರ ಜೆಡಿಎಸ್ ಅಭ್ಯರ್ಥಿ ಲಕ್ಷ್ಮಿ ಮಾರುತಿ ಹಿಂಡಸಗೀರಿ ಅವರು ಗೆಲುವಿನ ನಂತರ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಮಹಾಮನೆ ಬಸವಾನಂದ ಅಜ್ಜರ ಆಶೀರ್ವಾದ ಪಡೆಯಲು ಮುಂದಾಗಿದ್ದರು. ಸ್ವಾಮಿಜೀ ಆಶೀರ್ವಾದ ಮಾಡಿ ಮುಂದೆ ನಿಮ್ಮಗೆ ಒಳ್ಳೆಯ ಭವಿಷ್ಯ ಇದೆ. ಜನರ ಸಮಸ್ಯೆಗಳನ್ನು ಬಗಿಹರಿಸಲು ಮುಂದಾಗಿ,ಜನತೆ ಸೇವೆಯಲ್ಲಿ ತೊಡಗಿ, ರಾಜಕೀಯ ಜೀವನದಲ್ಲಿ ಸಾಕಷ್ಟು ಸಾರಿ ಸೋತರು ಭಯ ಪಡದೆ,ಮತ್ತೆ ಈ ಸಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಿರಿ ನಿಮ್ಮಗೆ ಒಳ್ಳೆಯದಾಗಿಲಿ ಎಂದು ಆಶೀರ್ವಾದ ಮಾಡಿದ್ರು....