ಕೃಷಿ ಕಾಯ್ದೆಗೆ ವಿರೋಧ: ಹುಬ್ಬಳ್ಳಿಯಲ್ಲಿ ನೀರಸ, ಧಾರವಾಡದಲ್ಲಿ ಪ್ರತಿಭಟನೆಯಲ್ಲಿ ಎಮ್ಮೆಯೂ ಭಾಗಿ.

ಹುಬ್ಬಳ್ಳಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ಇಂದು ಸಂಯುಕ್ತ ಕಿಸಾನ್ ಮೋರ್ಚಾ, ಸೇರಿದಂತೆ ರೈತ ಪರ ಹಾಗೂ ಕಾರ್ಮಿಕ ಪರ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್‍ಗೆ, ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಧಾರವಾಡದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಧಾರವಾಡದಲ್ಲಿ ಇಂದು ಬೆಳೆಗ್ಗೆಯೇ ಬೀದಿಗಿಳಿದ ರೈತರು, ಖಾಸಗಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ರೈತರೊಬ್ಬರೂ ಆಟೋ ಚಾಲಕನನ್ನ ತಡೆದು ಆತನ ಕಾಲಿಗೆ ಬಿದ್ದು ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ರೂ. ಇದೆ ವೇಳೆ ಜಯ ಕರ್ನಾಟಕ ಸಂಘಟನೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿ, ಸೈಕಲ ಏರಿ, ಎಮ್ಮೆಯನ್ನು ಪ್ರತಿಭಟನೆಯಲ್ಲೂ ಭಾಗವಹಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ, ಕೃಷಿ ಕಾಯ್ದೆಗಳು ರೈತರ ಮರಣ ಶಾಸನಗಳಾಗಿವೆ ಎಂದು ಆಕ್ರೋಶ ಹೊರಹಾಕಿದರು.