ಮಟ್ಕಾ ದಂಧೆ ಹಣ ತಂದು ಕೊಡುವಂತೆ ಒತ್ತಡ ಹಾಕ್ತಾರೆ ಶಾಸಕ ಶರಣು ಸಲಗರ |Bidar|
ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ ಹುಮನಬಾದ ಶಾಸಕ ರಾಜಶೇಖರ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ ಅವರು ಭಾರತ ದೇಶದಲ್ಲಿಯೇ ಎಲ್ಲಿಯೂ ನಡೆಯದ ದಂಧೆ ಬಸವಕಲ್ಯಾಣದಲ್ಲಿ ಮಾತ್ರ ನಡೆಯುತ್ತದೆ ಎಂದರು. ಮಟ್ಕಾ ದಂಧೆ ನಡೆಸಿ ನನಗೆ ಹಣವನ್ನು ತಂದು ಕೊಡಬೇಕು ಎಂದು ಶರಣ ನಾಡಿನಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರವರು ಪೊಲೀಸರ ಮೇಲೆ ಒತ್ತಡ ಹಾಕುತ್ತಾರೆ ಎಂದು ಬಸವಕಲ್ಯಾಣ ಶಾಸಕರ ವಿರುದ್ಧ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಗಂಭೀರ ಆರೋಪ ಮಾಡಿದರು.ಶಾಸಕ ಪಾಟೀಲರ ಮುಂದೆ ಪೊಲೀಸ್ ಅಧಿಕಾರಿಗಳಾದ ಡಿ ವೈ ಎಸ್ ಪಿ ಮತ್ತು ಸಿ ಪಿ ಐ ಅಳಲು ತೊಡಗಿಕೊಂಡಿದ್ದಾರೆ ಎಂದು ಶಾಸಕ ಪಾಟೀಲ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದರು.ಬೀದರ್ ಜಿಲ್ಲೆಯ ಪೊಲೀಸ್ ಇಲಾಖೆ ನಿಷ್ಕ್ರಿಯಾವಾಗಿದ್ದು ರಾಜ್ಯದ ಸರ್ಕಾರದ ಕೈಗೊಂಬೆ ಆಗಿ ಪೊಲೀಸ್ ಅಧಿಕಾರಿಗಳು ಕೆಲಸ ಮಾಡುತ್ತಾರೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದರು..