ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ನೇತೃತ್ವದಲ್ಲಿ ರೈತರ ಪ್ರತಿಭಟನೆ | Annigeri |

ಅಣ್ಣಿಗೇರಿ ರೈತ ಹೋರಾಟ ಹಾಗೂ ರೈತ ಹಿತರಕ್ಷಣಾ ಸಮಿತಿ ಅಣಿಗೇರಿ, ವತಿಯಿಂದ ತಾಲೂಕಿನ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ನೇತೃತ್ವದಲ್ಲಿ ಅಣ್ಣಿಗೇರಿ ಪಟ್ಟಣದಲ್ಲಿ ಪ್ರತಿಭಟನೆ ಮಾಡಲಾಯಿತು. 2016- 17ಅಣ್ಣಿಗೇರಿ ತಾಲೂಕು ವ್ಯಾಪ್ತಿಯ ಮೆಣಸಿನಕಾಯಿ ಬೆಳೆಗೆ ಪರಿಹಾರ ಘೋಷಣೆ ಆದರೂ ಇಲ್ಲಿಯವರೆಗೆ ರೈತರಿಗೆ ಪರಿಹಾರ ದೊರಕಿಲ್ಲ. 2018-19ರಿಂದ 2021ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ವಂತಿಕೆ ಸೇರಿ ಖಾಸಗಿ ವಿಮಾ ಕಂಪನಿಗಳಿಗೆ ಹಣ ಪಾವತಿಸಿದ್ದಾರೆ. ಆದರೆ ಖಾಸಗೀ ಕಂಪನಿಗಳು ಮುಂಗಾರು ಬೆಳಗಳಿಗೆ ಮಾತ್ರ ಅರ್ಜಿ ಸ್ವೀಕರಿಸುತ್ತಿದ್ದಾರೆ. ಖಾಸಗಿ ವಿಮಾ ಕಂಪನಿ ವಿರುದ್ಧ ರೈತರ ಪರವಾಗಿ ಎನ್. ಎಚ್.ಕೋನರೆಡ್ಡಿ ಹುಬ್ಬಳ್ಳಿ ಗೋಕುಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ದೂರಿದರು. ಅಣ್ಣಿಗೇರಿ ತಾಲೂಕಿನ ಚಕ್ಕಡಿ ರಸ್ತೆಗಳು ಮಳೆಯಿಂದ ಹಾಳಾಗಿದ್ದು ರೈತರಿಗೆ ಹೋಗಿಬರಲು ತೊಂದರೆಯಾಗುತ್ತಿರುವುದು ರಿಂದ ಕೂಡಲೇ ಅವುಗಳನ್ನು ಸರಿಪಡಿಸಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಭಗವಂತಪ್ಪ ಪುಟ್ಟಣ್ಣವರ, ಶಿವಣ್ಣ ಹುಬ್ಬಳ್ಳಿ, ರವಿ ಶೆಟ್ಟರ್, ದಾವಲ್ ಸಾಬ್ ಧರವನ, ಮಲ್ಲೇಶಪ್ಪ ಅಸುಂಡಿ, ಮಲ್ಲಿಕಾರ್ಜುನ್ ಮುಂಡಸದ, ಶರಣಪ್ಪ ಉಳ್ಳಾಗಡ್ಡಿ, ನಿಂಗಪ್ಪ ನಾವಳ್ಳಿ, ಸೇರಿದಂತೆ ಅನೇಕ ರೈತರು ಮುಖಂಡರು ಉಪಸ್ಥಿತರಿದ್ದರು.