ರೆಪೋ ದರ ಹೆಚ್ಚಳ; ಷೇರುಪೇಟೆಯಲ್ಲಿ ಭಾರೀ ಏರಿಳಿತ

ರೆಪೋ ದರ ಹೆಚ್ಚಳದಿಂದಾಗಿ ಭಾರತೀಯ ಷೇರುಪೇಟೆ ಇಂದು ಭಾರೀ ಏರಿಳಿತ ಕಂಡಿತು. ಇಂದು ಸೆನ್ಸೆಕ್ಸ್ 215 ಅಂಕ ಕುಸಿದು 62,410ರಲ್ಲಿ ವಹಿವಾಟು ಮುಗಿಸಿತು. ನಿಫ್ಟಿ 82 ಅಂಕ ಕುಸಿತವಾಗಿ, 18,560ರಲ್ಲಿ ವಹಿವಾಟು ಮುಗಿಸಿದೆ. ಇಂದು ಏಷ್ಯನ್ ಪೇಂಟ್ಸ್, ಎಚ್‍ಯುಎಲ್. ಬಿಪಿಸಿಎಲ್, ಲಾರ್ಸೆನ್, ಆ್ಯಕ್ಸಿಸ್ ಬ್ಯಾಂಕ್, ಐಟಿಸಿ ಷೇರುಗಳು ಹೆಚ್ಚು ಲಾಭ ಕಂಡವು. ಎನ್‍ಟಿಪಿಸಿ, ಎಸ್‍ಬಿಐ ಲೈಫ್, ಬಜಾಜ್ ಫಿನ್‍ಸರ್ವ್, ಇಂಡಸ್‍ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಬಜಾಜ್ ಅಟೋ ಹೆಚ್ಚು ನಷ್ಟ ಅನುಭವಿಸಿದವು.