ಶಿಗ್ಗಾಂವಿ ನಗರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ ದರ ಏರಿಕೆ ಹಿನ್ನೆಲೆಯಲ್ಲಿ ನಡೆಸಿದ ಪ್ರತಿಭಟನೆ

ಶಿಗ್ಗಾಂವಿ: ನಗರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ ದರ ಏರಿಕೆ ಹಿನ್ನೆಲೆಯಲ್ಲಿ ನಡೆಸಿದ ಪ್ರತಿಭಟನೆಯ ನೇತ್ರತ್ವ ವಹಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ತೀವ್ರವಾಗಿ ಟೀಕಿಸಿದರು. ನಂತರ ಬಸವರಾಜ ಬೊಮ್ಮಯಿಯವರ ಮನೆಯಲ್ಲಿ ಕೋವಿಡ್-೧೯ ಕೇಂದ್ರ ಮಾಡಿದ್ದು ಸರಿಯಾದ ವ್ಯವಸ್ಥೆಯನ್ನು ಒಳಗೊಂಡಲ್ಲ , ಸಾರ್ವಜನಿಕರಿಗೆ ಸುಳ್ಳು ಮಾತುಗಳನ್ನು ಹೇಳುವುದು ಒಳ್ಳೆಯದಲ್ಲವೆಂದರು. ಬೆಲೆ ಏರಿಕೆಯಿಂದಾಗಿ ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರು ಬದುಕು ಕಷ್ಷಕರವಾಗಿದೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.