ಅಕ್ರಮವಾಗಿ 4 ಕೋಟಿ ನಗದು ಸಾಗಿಸುತ್ತಿದ್ದ ವಾಹನ ವಶಪಡಿಸಿಕೊಳ್ಳಲಾಗಿದೆ
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ನಗದನ್ನು ಹೈದರಾಬಾದ- ವಿಜಯವಾಡ ಹೆದ್ದಾರಿಯಲ್ಲಿ ವಶಪಡಿಸಿಲಾಗಿದೆ. ವಶಪಡಿಸಿಕೊಳ್ಳಲಾದ ನಗದು ಮೌಲ್ಯ 4ಕೋಟಿ ಎನ್ನಲಾಗಿದೆ. ಹೈದರಾಬಾದ- ವಿಜಯವಾಡ ಹೆದ್ದಾರಿಯಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಈ ಅಕ್ರಮ ನಗದು ಪತ್ತೆಯಾಗಿದೆ, ಅಕ್ರಮವಾಗಿ ನಗದು ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ಮಾಡಲಾಗುತ್ತಿದೆ. ಹೈದರಾಬಾದ್ನಿಂದ ಚನ್ನೈಗೆ ತೆರಳುತ್ತಿದ್ದ ಟಿ.ಎಸ್.10, ಇ.ವೈ 6160 ನಂಬರಿನ ಕಾರಿನಲ್ಲಿ ನಗದು ಸಾಗಿಸಲಾಗುತ್ತಿತ್ತು. ಚಿಟ್ಯಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.