ಕಾಂಗ್ರೆಸ್ ನ ಕ್ಯಾಪ್ಟರ್ ಯಾರು?: ಪ್ರತಾಪ್ ಸಿಂಹ ಪ್ರಶ್ನೆ

ನಮ್ಮ ಕ್ಯಾಪ್ಟನ್ ಬಸವರಾಜ ಬೊಮ್ಮಾಯಿ ಆದ್ರೆ, ಕಾಂಗ್ರೆಸ್ ನ ಕ್ಯಾಪ್ಟರ್ ಯಾರು? ಸಿದ್ದರಾಮಯ್ಯ ಅವರದ್ದು ಒಂದು ಟೀಮ್, ಡಿಕೆಶಿದು ಮತ್ತೊಂದು ಟೀಮ್, ಸಿದ್ದರಾಮಯ್ಯ ಅವರಿಗೆ ಗೌರಿ ಪಾಳ್ಯದ ನ್ಯಾಷನಲ್ ಟ್ರಾವೆಲ್ ವೈಸ್ ಕ್ಯಾಪ್ಟನ್, ಡಿಕೆಶಿಗೆ ಫರ್ಜಿ ಕೆಫೆಯ ಪುಂಡ ವೈಸ್ ಕ್ಯಾಪ್ಟನ್, ಇವರಿಗೆ ಅಧಿಕಾರ ಕೊಟ್ಟರೆ ಕರ್ನಾಟಕದಲ್ಲಿ ಕನ್ನಡಿಗರ ಸರ್ಕಾರ ಬರೋದಿಲ್ಲ ತಾಲೀಬಾನ್ ಸರ್ಕಾರ ಬರುತ್ತೆ ಎಂದು ಕೊಪ್ಪಳದ ಜನ ಸ್ವರಾಜ್ ಸಮಾವೇಶದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಮತ್ತೇ ಪ್ರೀಯಾಂಕ ಖರ್ಗೆ ಕೆಣಕಿದ ಪ್ರತಾಪ್ ಸಿಂಹ, ಪ್ರಿಯಾಂಕ್ ಖರ್ಗೆ ಹೆಸರಿನಲ್ಲೆ ದಾಸ್ಯ ಇದೆ. ನೀವು ಬಿಟ್ ಕಾಯಿನ್ ಬಗ್ಗೆ ಕೇಳ್ತಿರಿ ಆದ್ರೆ, ಚುನಾವಣೆ ಆಯೋಗಕ್ಕೆ ಸಾಕಷ್ಟು ಮನೆ ಇರುವ ಮಾಹಿತಿಯನ್ನೇ ನೀಡಿಲ್ಲ ಎಂದರು.