ಒಂದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಸಿದ್ದರಾಮಯ್ಯಗೆ ಸೋಲು; ದೇವಿ ಭವಿಷ್ಯ!
ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಂತೆ ಸಿದ್ದು ಅವರ ಮನೆ ದೇವರು ರಾಜಕೀಯ ಭವಿಷ್ಯ ನುಡಿದಿದೆ. ಮಳವಳ್ಳಿ ತಾ| ಆದಿನಾಡು ಚಿಕ್ಕತಾಯಮ್ಮ ದೇವರು ಸಿದ್ದು ರಾಜಕೀಯ ಭವಿಷ್ಯ ನುಡಿದಿದ್ದು, ಸಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 2 ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಪರೋಕ್ಷವಾಗಿ ಭವಿಷ್ಯ ನುಡಿದಿದೆ. ಸಿದ್ದು ಪುತ್ರ ಡಾ.ಯತೀಂದ್ರ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುವ ವೇಳೆ ದೇವರು ಈ ಸೂಚನೆ ನೀಡಿದ್ದಾರೆ.