ಓಟಿಟಿ ಬಿಗ್ ಬಾಸ್ ಟಾಪರ್ ಆದ ರೂಪೇಶ್ ಶೆಟ್ಟಿ ಕೈ ಸೇರಿದ್ದ ಬಹುಮಾನದ ಮೊತ್ತ ಎಷ್ಟು ಗೊತ್ತಾ?

ನಟನಾಗಿ, ಆರ್ಜೆ ಆಗಿ ರೂಪೇಶ್ ಶೆಟ್ಟಿ ಫೇಮಸ್. 'ಬಿಗ್ ಬಾಸ್ ಕನ್ನಡ ಒಟಿಟಿ' ಶೋಗೆ ಬಂದ ಬಳಿಕ ಅವರಿಗೆ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದೇ ಸಪ್ಟೆಂಬರ್ 24ರಂದು ಬಿಗ್ ಬಾಸ್ ಟಿವಿ ಶೋ ಆರಂಭವಾಗಲಿದ್ದು ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್, ಆರ್ಯವರ್ಧನ್ ಗುರೂಜಿ ಹಾಗೂ ರಾಕೇಶ್ ಅಡಿಗ ಜೊತೆಯಲ್ಲಿ ಹಳೇ ಸೀಸನ್ನ 5 ಸ್ಪರ್ಧಿಗಳು ಕೂಡ 9ನೇ ಸೀಸನ್ಗೆ ಎಂಟ್ರಿ ಕೊಡಲಿದ್ದಾರೆ.
'ಬಿಗ್ ಬಾಸ್ ಕನ್ನಡ ಒಟಿಟಿ' ಶೋ ಕೊನೆಯಾಗಿದ್ದು, ಶುಕ್ರವಾರ (ಸೆ.16) ಅದ್ದೂರಿಯಾಗಿ ಫಿನಾಲೆ ನಡೆದಿದೆ. 42 ದಿನಗಳ ಕಾಲ ಸ್ಪರ್ಧಿಗಳ ನಡುವೆ ನಡೆದ ಪೈಪೋಟಿಯಲ್ಲಿ ನಾಲ್ಕು ಜನರು 'ಬಿಗ್ ಬಾಸ್ ಕನ್ನಡ ಸೀಸನ್ 9'ರಲ್ಲಿ ಸ್ಪರ್ಧಿಸುವ ಚಾನ್ಸ್ ಪಡೆದಿದ್ದಾರೆ. ಆ ಪೈಕಿ ರೂಪೇಶ್ ಶೆಟ್ಟಿ ಟಾಪರ್ ಆಗಿದ್ದು, ಫಿನಾಲೆ ವೇದಿಕೆಯಲ್ಲಿ 5 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾರೆ.
ಕೊನೇ ವಾರದಲ್ಲಿ ವಿಶೇಷ ಟಾಸ್ಕ್ಗಳನ್ನು ನೀಡಿದ್ದು, ಅವುಗಳಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ನೀಡುವ ಮೂಲಕ ರೂಪೇಶ್ ಶೆಟ್ಟಿ 5 ಲಕ್ಷ ಬಹುಮಾನದ ಮೊತ್ತ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ರೂಪೇಶ್ ಜೊತೆ ರಾಕೇಶ್ ಅಡಿಗ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ಕೂಡ ಟಿವಿ ಸೀಸನ್ಗೆ ನೇರ ಟಿಕೆಟ್ ಪಡೆದುಕೊಂಡಿದ್ದಾರೆ.
ನಟಿ ಸಾನ್ಯಾ ಐಯ್ಯರ್ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದ ನಟ ರೂಪೇಶ್ ಶೆಟ್ಟಿ ಉಳಿದ ಸ್ಪರ್ಧಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದು ಕಮ್ಮಿ. ವೀಕ್ಷಕರ ಜೊತೆ ದೊಡ್ಮನೆ ಒಳಗಿನ ಸ್ಪರ್ಧಿಗಳ ಜೊತೆಯೂ ಉತ್ತಮ ಹೆಸರು ಘಳಿಸಿದ್ದ ರೂಪೇಶ್ ಶೆಟ್ಟಿ ಬಿಗ್ ಬಾಸ್ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
'ಬಿಗ್ ಬಾಸ್ ಕನ್ನಡ ಸೀಸನ್ 9' ಶೋ ಸೆಪ್ಟೆಂಬರ್ 24ರಿಂದ ಆರಂಭ ಆಗಲಿದೆ. ಅದನ್ನು ಕೂಡ ಕಿಚ್ಚ ಸುದೀಪ್ ಅವರು ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿ ಫಿನಾಲೆಯಲ್ಲಿ ಗೆದ್ದ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್, ಆರ್ಯವರ್ಧನ್ ಗುರೂಜಿ ಹಾಗೂ ರಾಕೇಶ್ ಅಡಿಗ ಜೊತೆಯಲ್ಲಿ ಹಳೇ ಸೀಸನ್ನ 5 ಸ್ಪರ್ಧಿಗಳು ಕೂಡ 9ನೇ ಸೀಸನ್ಗೆ ಎಂಟ್ರಿ ನೀಡಲಿದ್ದಾರೆ. ಅವರ ಜೊತೆ 9 ಹೊಸ ಸ್ಪರ್ಧಿಗಳಿಗೆ ಅವಕಾಶ ಸಿಗುತ್ತಿದೆ. ಅವರೆಲ್ಲರ ನಡುವೆ ರೂಪೇಶ್ ಶೆಟ್ಟಿ ಅವರು ಯಾವ ರೀತಿ ಗುರುತಿಸಿಕೊಳ್ಳಲಿದ್ದಾರೆ ಎಂಬ ಕೌತುಕ ಮೂಡಿದೆ.