ಕಲಬುರಗಿ ಜಿಲ್ಲೆಯ ಮಳಖೇಡ್‌ನಲ್ಲಿ ʼತಾಂಡಾ ನಿವಾಸಿಗಳಿಗೆ ಹಕ್ಕುಪತ್ರʼ ವಿತರಿಸಿದ ಪ್ರಧಾನಿ ಮೋದಿ

ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಸಮಾವೇಶದ ವೇದಿಕೆಯಲ್ಲಿ ಪ್ರಧಾನಿ ಮೋದಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದರು. 51900 ಜನರಿಗೆ ಹಕ್ಕು ಪತ್ರ ವಿತರಿಸುವ ಮೂಲಕ ಸರ್ಕಾರ ಹೊಸ ಇತಿಹಾಸ ನಿರ್ಮಾಣ ಮಾಡಲಾಗಿದೆ.
ಪ್ರಧಾನಿ ಮೋದಿ ಬಳಿಕ ಬಂಜಾರ ಭಾಷೆಯಲ್ಲಿ ಭಾಷಣ ಆರಂಭಿಸಿದ್ದು,'ಕರುನಾಡಿನ ಜನತೆಗೆ ನಮಸ್ಕಾರಗಳು ' ಎಂದರು. ಭಾಷಣ ಮಾಡುತ್ತಾ ಶರಣ ಬಸವೇಶ್ವರರು, ಗಾಣಗಪುರ ದತ್ತಾತ್ರೇಯ ಸ್ಮರಿಸಿದ್ದಾರೆ. ಸಂತ ಸೇವಲಾಲ್‌ರಿಗೆ ನಮಿಸಿದರು.
ಇಂದು ನಿಮಗೆಲ್ಲರಿಗೂ ಹಕ್ಕು ಪತ್ರ ಸಿಕ್ಕಿದೆ. ಕಲಬುರಗಿ ಜಿಲ್ಲೆಯ ಇಂದು 51900 ಜನರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಬಸವಣ್ಣನವರು ಸಾಮಾಜಿಕ ನ್ಯಾಯಕ್ಕಾಗಿ ಕಾಂತ್ರಿ ಮಾಡಿದ್ದರು. ಬಸವಣ್ಣನವರ ಆಶಯದಂತೆ ಎಲ್ಲ ಸಮುದಾಯದ ಅಭಿವೃದ್ದಿಗೆ ಮುಂದಾಗಿದ್ದೇವೆ.
ಈ ಯೋಜನೆಗೆ 1993ರಲ್ಲಿ ಜಾರಿಗೆ ಶೀಫಾರಸ್ಸು ಮಾಡಲಾಗಿತು. ಆದರೆ ಹಕ್ಕು ಪತ್ರ ನೀಡುವ ಬಗ್ಗೆ ವಿಪಕ್ಷಗಳು ಯೋಚನೆ ಮಾಡಲಿಲ್ಲ. ಹಿಂದಿನ ಸರ್ಕಾರ ಓಟ್ ಬ್ಯಾಂಕ್ ಮಾಡುತ್ತಿದ್ದ ಕಾರಣದಿಂದಾಗಿ ಇಂತಹ ಹಕ್ಕು ಪತ್ರ ನೀಡಲು ಮುಂದಾಗಿಲ್ಲ. ಪ್ರತಿಯೊಂದು ಗ್ರಾಮಕ್ಕೂ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಬಂಜಾರ ಸಮುದಾಯ ಬೃಹತ್ ಕೊಡುಗೆ ನೀಡುತ್ತಿದೆ.
ಪಿಎಂ ಅವಾಸ್ ಯೋಜನೆ ಮೂಲಕ ಎಲ್ಲ ಸೌಲಭ್ಯವ ಸಿಗಲಿದೆ. 1994ರ ಚುನಾವಣಾ ಸಂದರ್ಭದಲ್ಲಿ ನಾನು ಈ ಭಾಗಕ್ಕೆ ಬಂದಿದ್ದೆ ಆಗ ನೀವೆಲ್ಲರೂ ಆರ್ಶೀವಾದ ಮಾಡಿದ್ದೀರಿ ಎಂದು ನೆನಪಿಸಿಕೊಂಡಿದ್ದಾರೆ.