ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನ ಸನ್ನಿಧಿಯಲ್ಲಿ ಪ್ರಾರ್ಥಿಸಿದ ನಟಿ ಪ್ರೇಮಾ!

ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನ ಸನ್ನಿಧಿಯಲ್ಲಿ ಪ್ರಾರ್ಥಿಸಿದ ನಟಿ ಪ್ರೇಮಾ!

ಡುಪಿ: ಸಂಕಷ್ಟ ನಿವಾರಣೆ ಮಾಡುವಂತೆ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ತಿಂಗಳು ನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ಕೊರಗಜ್ಜನ ಆದಿ ಸ್ಥಳ ಕುತ್ತಾರು ಪದವಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

ಇದೀಗ ಸ್ಯಾಂಡಲ್​ವುಡ್​ನ ಬಹುಕಾಲದ ನಟಿ ಪ್ರೇಮಾ ಕಾಪುವಿನಲ್ಲಿರುವ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥಿಸಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮಕ್ಕಾಗಿ ಉಡುಪಿ ಜಿಲ್ಲೆಗೆ ಭೇಟಿ ನೀಡಿರುವ ಪ್ರೇಮಾ, ಇಂದು ಬೆಳಗ್ಗೆ ಕಾಪುವಿನ ಕೊರಗಜ್ಜನ ಸನ್ನಿಧಿಗೆ ಬಂದಿದ್ದಾರೆ. ಈ ವೇಳೆ ಪ್ರಾರ್ಥಿಸುತ್ತಾ, ಮದುವೆಯಾಗಲು ಈಗಾಗಲೇ ವರ ನೋಡಿದ್ದೇನೆ. ಅದೇ ವರನನ್ನು ಮದುವೆ ಮಾಡಿಸುವಂತೆ ಪ್ರೇಮಾ ಕೊರಗಜ್ಜನಲ್ಲಿ ಹೇಳಿಕೊಂಡಿದ್ದಾರೆ.

ಕೊರಗಜ್ಜನಿಗೆ ಪೂಜೆ ಸಲ್ಲಿಸಿ, ಕಂಕಣ ಭಾಗ್ಯ ಕರುಣಿಸುವಂತೆ ಪ್ರಾರ್ಥಿಸಿಕೊಂಡಿರುವ ನಟಿ ಪ್ರೇಮಾ, ನಂತರ ಅಯ್ಯಪ್ಪ ದೇವಸ್ಥಾನ ಹಾಗೂ ಇತರೆ ದೈವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.