ಹುಬ್ಬಳ್ಳಿ: ಜಿನೋಮ್‌ ಸ್ವಿಕ್ವೇನ್ಸ್ ಟೆಸ್ಟ್ ಲ್ಯಾಬ್ ಗಳ ಹೆಚ್ಚಳಕ್ಕೆ ಚಿಂತನೆ:ಸಿಎಂ ಬೊಮ್ಮಾಯಿ‌

ಹುಬ್ಬಳ್ಳಿ: ಜಿನೋಮ್‌ ಸ್ವಿಕ್ವೇನ್ಸ್ ಟೆಸ್ಟ್ ಲ್ಯಾಬ್ ಗಳ ಹೆಚ್ಚಳಕ್ಕೆ ಚಿಂತನೆ:ಸಿಎಂ ಬೊಮ್ಮಾಯಿ‌

ಹುಬ್ಬಳ್ಳಿ: ಇಂದು ಬೆಳಗಾವಿಯಲ್ಲಿ ಸಭೆ ಇದೆ. ಪಕ್ಷದ ಶಾಸಕರು ಮುಖಂಡರ ಸಭೆ ಕರೆದಿದ್ದೆವೆ. ನಮ್ಮ ಅಭ್ಯರ್ಥಿ ಗೆಲ್ಲೋಕೆ ಏನೆಲ್ಲಾ ಸೂಚನೆ ನೀಡಬೇಕು ಅದನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಹೇಳಿದರು.

ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವು ನಿಶ್ಚಿತ. ಲಖನ್ ಜಾರಕಿಹೊಳಿ.‌ ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ನಮಗೇನು ಸಂಬಂಧವಿಲ್ಲ ಎಂದರು.

ಎಲ್ಲಾ ಕೊರೋನಾ ಕೇಸ್ ಗಳ ಜಿನೋಮ್ ಸ್ವಿಕ್ವೇನ್ಸ್ ಟೆಸ್ಟ್ ಮಾಡ್ತಿದ್ದೆವೆ. ಆ ಲ್ಯಾಬ್ ಗಳನ್ನು ಹೆಚ್ಚಿಗೆ ಮಾಡುವ ಚಿಂತನೆ ಮಾಡಿದ್ದೆವೆ. ಪರಿಣತರ ಜೊತೆ ಚರ್ಚಿಸಿ ಈಗಾಗಲೇ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಿದ್ದೆವೆ. ಏನೆಲ್ಲಾ ಅದಕ್ಕೆ ತಯಾರಿಬೇಕು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ವರದಿ ಬರುವಂತೆ ಮಾಡುತ್ತೇವೆ ಎಂದರು.

ಸಿಎಂ ಬೊಮ್ಮಾಯಿವರು ಸುಳ್ಳು ಹೇಳುತ್ತಿದ್ದಾರೆ ಎನ್ನೋ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು,
ಸಿದ್ದರಾಮಯ್ಯ ಅವರ ಬಗ್ಗೆ ಬಹಳ ಗೌರವವಿತ್ತು. ಆದರೆ ಇತ್ತೀಚಿನ ಹೇಳಿಕೆಗಳು ನಿರಾಸೆ ತಂದಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ರೇಣುಕಾಚಾರ್ಯ ಹೇಳಿಕೆಗೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿ ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದು ರೇಣುಕಾಚಾರ್ಯಗೆ ಟಾಂಗ್ ನೀಡಿದರು.