ಕ್ರಿಶ್ಚಿಯನರನ್ನ ಒದ್ದು ಓಡಿಸಬೇಕು ಪ್ರಮೋದ್ ಮುತಾಲಿಕ್ .
ಧಾರವಾಡ.
ಕ್ರಿಶ್ಚಿಯನ್ ಮತಾಂತರ ಬಗ್ಗೆ ಕಾನೂನು ತಂದರೆ ಮಾತ್ರ ಸಾಧ್ಯವಿಲ್ಲ,ಇದನ್ನ ತಡೆಗಟ್ಟಿ, ಕ್ರಿಶ್ಚಿಯನರನ್ನ ಒದ್ದು ಓಡಿಸಿಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಧಾರವಾಡದಲ್ಲಿಂದು ಮಾತಾನಾಡಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ ಕ್ರಿಶ್ಚಿಯನ್ ಮತಾಂತರ ಬಗ್ಗೆ ಸಾಕಷ್ಟು ಚರ್ಚೆ ಆಗ್ತಾಯಿವೆ. ಈ ಬಗ್ಗೆ ವಿಶೇಷವಾಗಿ ವಿಧಾನ ಸಭೆಯಲ್ಲಿ ಶಾಸಕ ಗುಳಿಹಟ್ಟಿ ಚಂದ್ರಶೇಖರ ಕೂಡ ಚರ್ಚೆ ಮಾಡಿದ್ರು, ಬೆಂಗಳೂರು ಬ್ಯಾಡರ್ ಹಳ್ಳಿಯಲ್ಲಿ ಆರ್ ಎಸ್ ಎಸ್ ನವರು ಮತಾಂತರದ ಪ್ರಕರಣ ಬೆಳಕಿಗೆ ತಂದಿದ್ದಾರೆ ಅವರನ್ನು ಪೊಲೀಸ್ ಇಲಾಖೆ ಕೂಡ ಬಂಧನ ಮಾಡಿತ್ತು. ರಾಜ್ಯ ಸರ್ಕಾರ ಕಾನೂನು ತಂದರೆ ಮಾತ್ರ ಸಾಧ್ಯವಿಲ್ಲ, ಇದನ್ನ ತಡೆಗಟ್ಟಬೇಕು. ಬ್ರಿಟಿಷರ ಕಾಲದಿಂದಲೂ ಇದು ನಡಿತಾನೆ ಬಂದಿದೆ. ಗೋಹತ್ಯಾ ನಿಷೇಧ ಕಾನೂನು ಸಹ ಜಾರಿ ಮಾಡಿದ್ದಿರೆ ಆದ್ರೆ ಏನು ಪ್ರಯೋಜನ ಇವತ್ತಿಗೂ ಕೂಡ ಗೋಕಳ್ಳತನ, ಗೋಹತ್ಯೆ ನಡಿತಾನೆ ಇದೆ. ಮತಾಂತರಕ್ಕಾಗಿ ಕಾನೂನು ಮಾಡದೇ ಅದನ್ನ ಜಾರಿಗೆ ತರಬೇಕು ಕ್ರಿಶ್ಚಿಯನ್ನರನ್ನು ಒದ್ದು ಓಡಿಸುವ ದೃಷ್ಟಿಯಿಂದ ಇದನ್ನ ಗಂಭೀರ ತೆಗೆದುಕೊಳ್ಳಬೇಕು ಎಂದು ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಆಗ್ರಹಿಸಿದರು