ಬೆಂಗಳೂರು ಯುವ ಪಥಕ್ಕೆ ಮಾಜಿ ಸಿಎಂ. ಬಿ.ಎಸ್. ವೈ ಚಾಲನೆ

ಬೆಂಗಳೂರು ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾದ ಎಬಿವಿಪಿ ಕಾರ್ಯಾಲಯ ಕಟ್ಟಡ "ಯುವಪಥ" ದ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಹಿರಿಯರು ಜ್ಯೋತಿ ಬೆಳಗಿಸುವ ಮೂಲಕ ಕಟ್ಟಡದ ಉದ್ಘಾಟನೆ ಮಾಡಿದರು. ನಂತರ ನಡೆದ "ಸ್ನೇಹಮಿಲನ" ಕಾರ್ಯಕ್ರಮದಲ್ಲಿ, ಆರ್ ಎಸ್ ಎಸ್ ನ ದಕ್ಷಿಣ ಭಾರತದ ಪ್ರಮುಖ್ ತಿಪ್ಪೇಸ್ವಾಮಿ, ಸಂಸದರಾದ ತೇಜಸ್ವಿ ಸೂರ್ಯ,ಪಿಸಿ ಮೋಹನ್, ಸಚಿವರಾದ ಬಿ.ಸಿ.ನಾಗೇಶ್, ಅಶ್ವಥ್ ನಾರಾಯಣ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಇತರ ಗಣ್ಯರು,ಎ.ಬಿ.ವಿ.ಪಿ.ಯ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿ ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಎಸ್ವೈ ಸೇರಿದಂತೆ ಅನೇಕ ಗಣ್ಯರು ಮಾತನಾಡಿ, ಯುವಶಕ್ತಿ ದೇಶದ ಆಸ್ಥಿ ಅದನ್ನು ಸದ್ಭಳಕೆ ಮಾಡುವತ್ತ ಗಮನ ಹರಿಸಲು ಎಬಿವಿಪಿ ಕೆಲಸ ಮಾಡುತ್ತಾ ಬಂದಿದೆ ಎಂದರು. ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಮಾರಂಭದ ಕೊನೆಯಲ್ಲಿ ವಂದೇ ಮಾತರಂ ಹಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.