ಕೇವಲ 24 ಗಂಟೆಯಲ್ಲಿ ಮೂರು ಆಸ್ಪತ್ರೆಯ 100ಕ್ಕೂ ಹೆಚ್ಚು ವೈದ್ಯರಿಗೆ ಕೊರೋನಾ ಪಾಸಿಟಿವ್

ಕೇವಲ 24 ಗಂಟೆಯಲ್ಲಿ ಮೂರು ಆಸ್ಪತ್ರೆಯ 100ಕ್ಕೂ ಹೆಚ್ಚು ವೈದ್ಯರಿಗೆ ಕೊರೋನಾ ಪಾಸಿಟಿವ್

ಕೋಲ್ಕತ್ತಾ: ದೇಶಾದ್ತಂಯ ಕೊರೋನಾ ( Covid19 ) ಆರ್ಭಟ ಮುಂದುವರೆದಿರುವಾಗಲೇ, ರೋಗಿಗಳ ಸೇವೆಯಲ್ಲಿ ನಿರತಂತ ವೈದ್ಯರಿಗೂ ( Doctor ) ಕೊರೋನಾ ಶಾಕ್ ಕೊಡ್ತಾ ಇದೆ. ಕೋಲ್ಕತ್ತಾದಲ್ಲಿ ಕೇವಲ 24 ಗಂಟೆಯಲ್ಲೇ ವಿವಿಧ ಆಸ್ಪತ್ರೆಯ 100ಕ್ಕೂ ಹೆಚ್ಚು ವೈದ್ಯರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಕೋಲ್ಕತ್ತಾದ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ 3 ಕಾಲೇಜುಗಳಲ್ಲಿ ಕಳೆದ 24 ಗಂಟೆಯಲ್ಲಿ 100ಕ್ಕೂ ಹೆಚ್ಚು ವೈದ್ಯರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ದೃಢಪಟ್ಟಿರೋದಾಗಿ ತಿಳಿದು ಬಂದಿದೆ. ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 70 ವೈದ್ಯರು, ಕಾಳಿಘಾಟ್ ಚಿತ್ತರಂಜನ್ ಸೇವಾ ಸದನ್ ಆಸ್ಪತ್ರೆಯ 24 ವೈದ್ಯರು ಹಾಗೂ ನೇತ್ರವಿಜ್ಞಾನ ಸಂಸ್ಥೆಯ 12 ವೈದ್ಯರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ. 

ವೈದ್ಯರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟ ನಂತ್ರ, ಅವರನ್ನು ಐಸೋಲೇಷನ್ ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸಂಪರ್ಕಿತರನ್ನು ಪತ್ತೆ ಹಚ್ಚೋದೆ ಈಗ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸವಾಲ್ ಆಗಿ ಪರಿಣಮಿಸಿದೆ.