ಯಾರಾಗ್ತಾರೆ ಬೇಲೂರು ವಿಧಾನಸಭಾ ಕ್ಷೇತ್ರ ಸೂತ್ರದಾರ
ಬೇಲೂರು: ಬೇಲೂರು ವಿಧಾನ ಸಭಾ ಕ್ಷೇತ್ರದ ಸೂತ್ರಧಾರ ಯಾರು ಎಂಬುದು ಕೆಲವೇ ತಿಂಗಳಲ್ಲಿ ತಿಳಿಯಲಿದೆ. ಈಗಾಗಲೇ ವಿಧಾನ ಸಭಾ ಟಿಕೇಟ್ ಆಕಾಂಕ್ಷಿಗಳು ಹಬ್ಬ ಹರಿದಿನ, ತಿಥಿ, ಮದುವೆ,ಇನ್ನಿತರೆ ಕಾರ್ಯ ಕ್ರಮಗಳಿಗೆ ಹೋಗೋದು ಶುರುವಾಗಿದೆ. ಬಾಡೂಟ ಹಾಕುವ ಮೂಲಕ ಓಟಿಗೆ ಬಲೆ ಬೀಸಲು ಶುರು ಮಾಡಿಯೆ ಬಿಟ್ಟಿದ್ದಾರೆ.
ಕಾಂಗ್ರೆಸ್, ಬಿಜೆಪಿ,ಜೆಡಿಎಸ್, ಬಿಎಸ್ಪಿ,ಪಕ್ಷ ಸೇರಿದಂತೆ, ಎಲ್ಲಾ ಪಕ್ಷದಲ್ಲೂ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಬಿಜೆಪಿ,ಜೆಡಿಎಸ್, ಕಾಂಗ್ರೆಸ್ನ ಕೆಲ ನಾಯಕರಂತೂ ನನಗೆ ಟಿಕೇಟ್ ಫಿಕ್ಸ್ ಅಂದುಕೊಂಡಿದ್ದಾರೆ.
ಬಿಜೆಪಿಯಿಂದ,ಹುಲ್ಲಳ್ಳಿ ಸುರೇಶ್, ಕೊರಟಿಕೆರೆ ಪ್ರಕಾಶ್, ಸಿದ್ದೇಶ್ ನಾಗೇಂದ್ರ, ಸುರಭಿರಘು ಆಕಾಂಕ್ಷಿಯಾದರೆ, ಕಾಂಗ್ರೆಸ್ ನಿಂದ ಮಾಜಿ ಸಚಿವ, ಬಿ.ಶಿವರಾಂ. ವೈ.ಎನ್. ಕೃಷ್ಣೆಗೌಡ. ಇ.ಎಚ್.ಲಕ್ಷ್ಮಣ್. ಗ್ರಾನೈಟ್ ರಾಜಶೇಖರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಜೆಡಿಎಸ್ ನಿಂದ ಹಾಲಿ ಶಾಸಕ ಕೆ.ಎಸ್.ಲಿಂಗೇಶ್, ಬಿಎಸ್ಪಿಯಿಂದ ಗಂಗಾಧರ್ ಬಹುಜನ್ ಆಕಾಂಕ್ಷಿ ಯಾಗ ಬಹುದು ಎಂಬ ನಿರೀಕ್ಷೆ ಇದೆ. ಹಾಗಾದರೆ.. ಯಾರಿಗೆ ಮತ ದಾರರ ಒಲವಿದೆ. ಎಂಬ ಜನಾಭಿಪ್ರಾಯ,ನೋಡ್ತಾ ಹೋಗೋಣ..
ಕಳೆದ ಹತ್ತು ವರ್ಷ ವೈ.ಎನ್ ರುದ್ರೇಶ್ಗೌಡ ಶಾಸಕರಾಗಿದ್ದರು. ಕಳೆದ ೨೦೧೮ರಲ್ಲಿ ಮಾಜಿ ಸಚಿವ ಬಿ.ಶಿವರಾಂ ಆಕಾಂಕ್ಷಿಯಾಗಿದ್ದರು. ಆದರೆ ದಿ.ರುದ್ರೇಶ್ಗೌಡ ಅವರು ಅಕಾಲಿಕ ಮರಣಕ್ಕೀಡಾದ ಪರಿಣಾಮ, ಪಕ್ಷದ ವರಿಷ್ಠರು ಅನುಕಂಪದ ಆಧಾರದ ಮೇಲೆ, ತಮ್ಮ ಪತ್ನಿ ಕೀರ್ತನಾ ರುದ್ರೇಶ್ ಗೌಡರಿಗೆ ಟಿಕೇಟ್ ನೀಡಿತ್ತು. ಆದರೆ ಅನುಕಂಪ ಕೈ ಹಿಡಿಯಲೆ ಇಲ್ಲ. ಕಾರಣ ರುದ್ರೇಶ್ ಗೌಡರ ಅಧಿಕಾರವನ್ನು ಜನ ಮೆಚ್ಚಿಕೊಂಡಿದ್ದು ನಿಜ. ಆದರೆ ಅವರ ಸಹೋದರ ವೈ.ಎನ್.ಕೃಷ್ಣೆಗೌಡ, ಅಣ್ಣನ ಆಡಳಿತವನ್ನು ದುರುಪಯೋಗ ಪಡಿಸಿಕೊಂಡರು. ಅನ್ನೋ ಮಾತು ಇದೆ. ಕೀರ್ತನಾ ರುದ್ರೇಶ್ ಗೌಡ, ಡಮ್ಮಿಅಭ್ಯರ್ಥಿ ಎಂಬ ಕಾರಣಕ್ಕೆ.ಹಿಂದುಳಿದ ವರ್ಗ, ಹಾಗೂ ಎಸ್ಸಿ ಎಸ್ಟಿ ಮತದಾರರು ಜೆಡಿಎಸ್ನ ಕೆ.ಎಸ್.ಲಿಂಗೇಶ್ ಕೈ ಹಿಡಿದರು. ಕಾರಣ ಲಿಂಗೇಶ್ ಒಮ್ಮೆ ಸೋತಿದ್ರು, ಜೊತೆಗೆ ತಮ್ಮ ಮಗ ಅಪಘಾತದಲ್ಲಿ ತೀರಿಕೊಂಡಿದ್ರು .ಎಂಬ ಕಾರಣಕ್ಕೆ ಅನುಕಂಪದ ಅಲೆ ಲಿಂಗೇಶ್ಗೆ ಒಲಿದಿತ್ತು. ಆದರೆ ಈ ಭಾರಿ ಲಿಂಗೇಶ್ ರವರ ಹೆಸರು ಎಲ್ಲಿಯೂ ಮುಂಚಾಣಿಯಲ್ಲಿಲ್ಲ. ಕಾರಣ ಕೇವಲ ಲಿಂಗಾಯತ ಸಮುದಾಯದ ಪರ ಮಾತ್ರ ಕೆಲಸ ಮಾಡುತ್ತಿದ್ದಾರೆ, ದಲಿತರನ್ನ ಕಡೆಗಣಿಸಿದ್ದಾರೆ,ಎಂಬ ಮಾತೂ ಇದೆ. ಜೊತೆಗೆ, ಸಾರ್ವಜನಿಕರ ಜೊತೆ ಉತ್ತಮ ಒಡನಾಟ, ಹೊಂದಿಲ್ಲ, ಜೊತೆಗೆ ಸ್ವ ಪಕ್ಷದ ಕೆಲ ಮುಖಂಡರ ಜೊತೆ, ಭಿನ್ನಾಭಿಪ್ರಾಯ ಇವೆಲ್ಲವನ್ನೂ ಗಮನಿಸಿದರೆ ಈ ಭಾರಿ ಲಿಂಗೇಶ್ಗೆ ಅಷ್ಟೇನೂ ಮತದಾರರ ಒಲವು ಇಲ್ಲವೇನೋ ..ಎಂಬಂತಿದೆ.
ಲಿಂಗೇಶ್ ಈ ಭಾರಿ ಗೆಲುವು ಸಾಧಿಸ್ತಾರಾ ಎಂಬ ಪ್ರಶ್ನೆ ಮತದಾರರಲ್ಲಿ ಸತ್ಯ ಮೌನವಾಗಿದೆ. ಇನ್ನೂ. ಹೇಳಿ ಕೇಳಿ,ವೈ.ಎನ್ ಕೃಷ್ಣೆಗೌಡ,ಮಾತ್ರ ಅಣ್ಣನ ಜೊತೆಯಲ್ಲಿದ್ದರೂ ಕೂಡ ಅಷ್ಟೇನೂ ಜನ ಇಷ್ಟ ಪಡುವ ವ್ಯಕ್ತಿ ಏನಲ್ಲ. ಅವರ ಬಗ್ಗೆ ಹಲವಾರು ಆರೋಪಗಳು ಕೂಡ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿವೆ. ವಿಷ್ಣುಸಮುದ್ರ ಕೆರೆಯ ಹೂಳೆತ್ತುವ ಕಾಮಾಗಾರಿಯಲ್ಲಿ ೫ ಕೋಟಿ ಗುಳುಂ ಮಾಡಿದ್ದಾರೆ, ಎಂಬ ಮಾತೂ ಇದೆ. ಜೊತೆಗೆ, ಅಕ್ರಮ- ಸಕ್ರಮ ೫೩ ರಲ್ಲಿ ಹಣ ವಸೂಲಿ ಮಾಡಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಲ್ಲಿ (ಕೊಳವೆ ಬಾವಿ) ಹಣ ವಸೂಲಿ ಮಾಡಿದ್ದಾರೆ. ಎಂಬ ಮಾತು ಇದೆ.ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳವಂತಹ ಸಾಮಾರ್ಥ್ಯ ಅವರಲ್ಲಿ ಇಲ್ಲ ಎಂಬ ಮಾತು ಇದೆ.ಇವೆಲ್ಲವನ್ನೂ ನೋಡಿದರೆ, ಕೃಷ್ಣೆಗೌಡ ಬೇಲೂರು ವಿಧಾನ ಸಭೆ ಚುನಾವಣೆಗೆ ಸೂಕ್ತ ವ್ಯಕ್ತಿ ಅಲ್ಲ ಎಂಬ ಮಾತು ಇದೆ.
ಬಿ.ಶಿವರಾಂ.": ಇನ್ನೂ,ಕಾಂಗ್ರೆಸ್ ನಿಂದ ಬಹುತೇಕ ಬಿ.ಶಿವರಾಂಗೆ ಟಿಕೇಟ್ ಎಂಬ ಮಾತು ಕೇಳಿ ಬರುತ್ತಿದೆ.ಆದರೆ, ವೈ.ಎನ್.ಕೃಷ್ಣೆಗೌಡ ಹಾಗೂ ಗ್ರಾನೈಟ್ ರಾಜಶೇಖರ್ ಶಿವರಾಂ ವಿರುದ್ದ ಸಿಡಿದೆದ್ದ ಸಹೋದರರಂತೆ ಹೋರಾಟ ಮಾಡ್ತಾ ಇದ್ದಾರೆ.
ಕಳೆದ ಹತ್ತು ವರ್ಷದ ಅವದಿಯಲ್ಲಿ ದಿ.ವೈ.ಎನ್.ರುದ್ರೇಶ್ಗೌಡ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ, ಬೇಲೂರು ಅಭಿವೃದ್ಧಿ ಅಷ್ಟೆನೂ ಕಾಣಲಿಲ್ಲ.ರಸ್ತೆ ಅಗಲೀಕರಣ ಆಗಲಿಲ್ಲ.ಸರ್ಕಾರಿ ಕಚೇ ರಿ ಕಟ್ಟಡಗಳು ಬಾಡಿಗೆ ಕಟ್ಟಡಗಳಾಗಿಯೆ ಉಳಿದವು.ಕೇವಲ ಕೆಲ ನಾಯಕರಿಗೆ ಮಾತ್ರ ಮಣೆ ಹಾಕಿದ್ದಾರೆ. ಹಿಂದುಳಿದ ವರ್ಗ, ಎಸ್ಸಿ, ಎಸ್ಟಿ ನಾಯಕರನ್ನ ಬೆಳಸಲಿಲ್ಲ ಎಂಬ ಮಾತಿದೆ.
ಬಿ.ಶಿವರಾಂ ಗೆ ತಾಲ್ಲೂಕಿನಲ್ಲಿ ಈ ಭಾರಿ ಮತದಾರರು ಮಣೆ ಹಾಕ್ತಾರಾ ಅಂತ ನೋಡೋದಾದ್ರೆ,..ಹೇಳಿ ಕೇಳಿ ಶಿವರಾಂ ಸ್ಥಳೀಯ ರೇನೂ ಅಲ್ಲ. ಹಣ ಖರ್ಚು ಮಾಡಲ್ಲ. ಅನ್ನೋ ಮಾತು ಇದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಜೋರಾಗಿಯೆ ಇರುವುದರಿಂದ ಮತದಾರರ ಮನವೊಲಿಕೆ ಬಹಳ ಅಗತ್ಯವಿದೆ ಎಂಬ ಮಾತು ಇದೆ. ಮತ್ತೊಂದೆಡೆ ಶಿವರಾಂ ರವರನ್ನ ಮಣಿಸಲು ರಾಜಶೇಖರನ ರಾಜ್ಯಭಾರ ಜೋರಾಗಿಯೆ ನಡಿತಿದೆ.ಒಟ್ಟಾರೆ ಯಾರಿಗೆ ಗೆಲುವು,ಯಾರಿಗೆ ಸೋಲು ಎಂಬುದು ಟಿಕೇಟ್ ಹಂಚಿಕೆ ಮೇಲೆ ನಿಂತಿದೆ ಅಂತಾರೆ ಮತದಾರರು.