ಕ್ರಿಕೆಟಿಗನನ್ನು ವರಿಸಿದ ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯಾ

ಕ್ರಿಕೆಟಿಗನನ್ನು ವರಿಸಿದ ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯಾ

ಚೆನ್ನೈ : ಎಂದಿರನ್ ಸಿನಿಮಾ ನಿರ್ದೇಶಕ ಎಸ್. ಶಂಕರ್ ಅವರ ಪುತ್ರಿ ಐಶ್ವರ್ಯಾ ಅವರ ಕಲ್ಯಾಣ ಕ್ರಿಕೆಟಿಗ ರೋಹಿತ್ ದಾಮೋದರನ್ ಜತೆ ಇಂದು (ಜೂನ್ 27) ನೆರವೇರಿತು.

ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಜರುಗಿದ ವಿವಾಹ ಕಾರ್ಯಕ್ರಮಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಮಗ, ರಾಜಕಾರಣಿ ಉದಯಾನಿಧಿ ಸ್ಟಾಲಿನ್, ವೈದ್ಯಕೀಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮಾ ಸುಬ್ರಮಣಿಯಮ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ನವ ವಧು-ವರರಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು.

ಕೊವಿಡ್ ಸಂಖ್ಯೆಗಳು ಕಡಿಮೆ ಆದ ನಂತರದಲ್ಲಿ ಚೆನ್ನೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಸಲು ನಿರ್ದೇಶಕ ಶಂಕರ್ ನಿರ್ಧರಿಸಿದ್ದಾರೆ. ಈ ವೇಳೆ ಫಿಲ್ಮ್ ಇಂಡಸ್ಟ್ರಿಯ ಸಾಕಷ್ಟು ಜನರಿಗೆ ಆಮಂತ್ರಣ ಸಿಗುವ ಸಾಧ್ಯತೆ ಇದೆ.

ಇನ್ನು ರೋಹಿತ್ ದಾಮೋದರನ್ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್​ಪಿಎ​ಲ್) ಆಟಗಾರ. ರೋಹಿತ್ ತಂದೆ ದಾಮೋದರನ್ ಉದ್ಯಮಿ. ಟಿಎನ್​ಪಿಎ​ಲ್​ನಲ್ಲಿರುವ ‘ಮಧುರೈ ಪ್ಯಾಂಥರ್ಸ್’ ಫ್ರಾಂಚೈಸಿ ಒಡೆತನವನ್ನು ದಾಮೋದರನ್ ಹೊಂದಿದ್ದಾರೆ. ರೋಹಿತ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಶ್ವರ್ಯಾ ವೃತ್ತಿಯಲ್ಲಿ ವೈದ್ಯೆ.