ಹೊಸ ಲುಕ್ ನಲ್ಲಿ ರೇಲ್ವೆ ಸ್ಟೇಷನ್
ವರಕವಿ ದ.ರಾ ಬೇಂದ್ರೆ,ರಾಷ್ಟ್ರ ಕವಿ ಕುವೆಂಪು, ಶಿವರಾಮ ಕಾರಂತ,ವಿ ಕೃ ಗೋಕಾಕ, ಗಿರೀಶ ಕಾರ್ನಾಡ್ ಸೇರಿದಂತೆ ಹತ್ತು ಹಲವು ಸಾಹಿತಿಗಳ ಭಾವಚಿತ್ರಗಳನ್ನು ಈ ಕಟ್ಟಡದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ .ಹಾಗಾದರೆ ನೀವು ಇದನ್ನು ಸಾಹಿತ್ಯ ಭವನ ಅಂದುಕೊಂಡಿರಬಹುದು, ಅದು ನಿಮ್ಮ ತಪ್ಪು ಕಲ್ಪನೆ.ಇದು ನಮ್ಮ ಸಾಂಸ್ಕೃತಿಕ ನಗರಿ ಧಾರವಾಡದ ರೇಲ್ವೆ ನಿಲ್ದಾಣದ ವಿಹಂಗ ನೋಟ. ಬನ್ನಿ ಅದು ಯಾವ ರೀತಿ ಇದೆ ಅಂತ ನೋಡೋಣ.ಇದು ನಮ್ಮ ಪೇಡಾ ನಗರಿಯ ರೇಲ್ವೆ ನಿಲ್ದಾಣ.1936ನೇ ಇಸ್ವಿಯಲ್ಲಿ ಅಂದಿನ ಮದ್ರಾಸ್ ದಕ್ಷಿಣ ಮರಾಠಾ ರೈಲ್ವೆ ವತಿಯಿಂದ ಧಾರವಾಡದಲ್ಲಿ ರೈಲ್ವೆ ನಿಲ್ದಾಣ ನಿರ್ಮಿಸಲಾಗಿತ್ತು. ಆದರೆ ಈ ನಿಲ್ದಾಣಕ್ಕೆ ಈಗ ಹೈಟೆಕ್ ಸ್ಪರ್ಶ ನೀಡಲಾಗಿದೆ. ನಿಲ್ದಾಣದ ಪ್ರತಿ ಗೋಡೆಗಳ ಮೇಲೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ನಗರಿಯ ಇತಿಹಾಸವನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ನಿಲ್ದಾನದಲ್ಲಿ ಪ್ರಯಾಣಿಕರ ಆಕರ್ಷಣೆಗಾಗಿ ಉದ್ಯಾನವನ,ದಕ್ಷಿಣ ಭಾರತದ ನಾಟ್ಯದ ವಿವಿಧ ಭಂಗಿಗಳ ಚಿತ್ರಗಳು, ಕರಾವಳಿ ಪ್ರದೇಶದ ಕಥಕ್ಕಳಿ ನೃತ್ಯದ ಚಿತ್ರಗಳು ಹೀಗೆ ಹತ್ತು ಹಲವು ಆಕರ್ಷಣೆ ಚಿತ್ರಗಳನ್ನು ಚಿತ್ರಿಸಲಾಗಿದೆ...ಈ ರೈಲ್ವೆ ನಿಲ್ದಾಣದ ನೂತನ ಕಟ್ಟಡದ ವಿನ್ಯಾಸಕ್ಕೆ ಬರೋಬ್ಬರಿ 19.95 ಕೋಟಿ ರೂ.ವೆಚ್ಚವಾಗಿದೆ.2 ವರ್ಷಗಳ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಈಗ ಅಂತಿಮ ಹಂತಕ್ಕೆ ಬಂದಿದ್ದು, ಬಹುತೇಕ ಮುಕ್ತಾಯ ಹಂತದಲ್ಲಿದೆ.ಈ ಕಟ್ಟಡವನ್ನು ಭಾರತೀಯ ರೇಲ್ವೆ ವಿನೂತನ ಕಲ್ಪನೆ ಅಡಿ `ಬಯೋಫಿಲಿಕ್ ವಾಸ್ತುಶಿಲ್ಪ'ಆಧರಿಸಿ ನಿರ್ಮಿಸಲಾಗಿದೆ.ಇನ್ನು ಈ ನಿಲ್ದಾಣದ ಪ್ರವೇಶ ದ್ವಾರ ಹಾಗೂ ಟಿಕೆಟ್ ಬುಕ್ಕಿಂಗ್ ಕಚೇರಿಗೆ ಹೈಟೆಕ್ ಸ್ಪರ್ಷ ನೀಡಲಾಗಿದೆ. ನಿಲ್ದಾಣದ ಮುಂಭಾಗದ ಅಂದ ಹೆಚ್ಚಿಸಲು ಐ ಲವ್ ಧಾರವಾಡ ಎಂಬ ಫಲಕ ಅಳವಡಿಸಲಾಗಿದೆ.ಇದು ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಕೈ ಬೀಸಿ ಕರೆಯುತ್ತದೆ. ಈಗ ಈ ಸ್ಥಳ ಪ್ರಯಾಣಿಕರ ಸೆಲ್ಪಿ, ತಾಣವಾಗಿದೆ. ಒಟ್ಟಾರೆ ಧಾರವಾಡ ನಿಲ್ದಾಣಕ್ಕೆ ಹೊಸ ಕಾಯಕಲ್ಪ ಕಲ್ಪಿಸಿದ ಕೇಂದ್ರ ಸರ್ಕಾರಕ್ಕೆ 9ಲೈವ್ ದಿಂದ ಒಂದು ಸೆಲ್ಯೂಟ್.