ಮಂಗಳೂರು ರೈಲು ಸಂಚಾರದಲ್ಲಿ ಬದಲಾವಣೆ

ಮಂಗಳೂರು ರೈಲು ಸಂಚಾರದಲ್ಲಿ ಬದಲಾವಣೆ

ಮಂಗಳೂರು: ತಿರುವನಂತಪುರ ರೈಲ್ವೇ ವಿಭಾಗದ ಕೊಚ್ಚುವೇಲಿ ಯಾರ್ಡ್‌ ಕಾಮಗಾರಿ ಹಿನ್ನೆಲೆ ಇಂದೋರ್‌‌-ಕೊಚ್ಚುವೇಲಿ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗುವುದು. ಇಂದೋರ್‌ನಿಂದ ಡಿ.6ರಂದು ರಾತ್ರಿ 9.40ಕ್ಕೆ ಹೊರಡುವ ರೈಲು ಮಂಗಳೂರು ಜಂಕ್ಷನ್‌ & ಕೊಚ್ಚುವೇಲಿ ಮಧ್ಯೆ ಅಂಶಿಕವಾಗಿ ರದ್ದಾಗಿರುತ್ತದೆ. ಕೊಚ್ಚುವೇಲಿಯಿಂದ ಇಂದೋರ್‌ಗೆ ಡಿ.9ರಂದು ಬೆಳಗ್ಗೆ ಹೊರಡಲಿರುವ ರೈಲು ಕೊಚ್ಚುವೇಲಿ & ಮಂಗಳೂರು ಮಧ್ಯೆ ರದ್ದಾಗಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.