ಮಂಗಳೂರು ಸ್ಪೋಟ ಪ್ರಕರಣ : ರಾಜ್ಯ ಸರ್ಕಾರದಿಂದ ಗಾಯಾಳು ಪುರುಷೋತ್ತಮ್ ಚಿಕಿತ್ಸಾ ವೆಚ್ಚ ಭರಿಕೆ : ಸಚಿವ ಆರಗ ಜ್ಞಾನೇಂದ್ರ

ಮಂಗಳೂರು : ಮಂಗಳೂರು ಸ್ಪೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪುರುಷೋತ್ತಮ್ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಮಂಗಳೂರು ಸ್ಪೋಟ ಪ್ರಕರಣ ಸಂಬಂಧ ಮಂಗಳೂರಿಗೆ ಭೇಟಿ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಗಾಯಾಳು ಆಟೋ ಚಾಲಕ ಪುರುಷೋತ್ತಮ್ ನನ್ನು ಭೇಟಿ ಮಾಡಿದ ಸಾಂತ್ವನ ಹೇಳಿದರು
ನಂತರ ಮಾತನಾಡಿದ ಸಚಿವರು ಗಾಯಾಳು ಪುರುಷೋತ್ತಮ್ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ , ಪ್ರಕರಣ ಸಂಬಂಧ ಹಲವರನ್ನು ವಿಚಾರಣೆಗೊಳಪಡಿಸಿದ್ದೇವೆ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.