ಪೇಯಿಂಗ್ ಗೆಸ್ಟ್ ಮತ್ತು ಇತರ ಕತೆಗಳು' ಕಥಾಸಂಕಲನ ಬಿಡುಗಡೆ

ಪೇಯಿಂಗ್ ಗೆಸ್ಟ್ ಮತ್ತು ಇತರ ಕತೆಗಳು' ಕಥಾಸಂಕಲನ ಬಿಡುಗಡೆ

ಮಂಗಳೂರು : ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಸಂವಾದಕ್ಕೆ ಚಾಲನೆ ನೀಡುವುದೂ ಸಾಹಿತ್ಯದ ಕೆಲಸವಾಗಿದೆ. 'ಪೇಯಿಂಗ್ ಗೆಸ್ಟ್ ಮತ್ತು ಇತರ ಕತೆಗಳು' ಓದುಗನನ್ನು ಸಂವಾದಕ್ಕೆ ಆಹ್ವಾನಿಸುತ್ತಿದೆ. ಸಾಮಾನ್ಯ ಪಾತ್ರಗಳ ಮೂಲಕ ಸಣ್ಣ ಕತೆಗಳಲ್ಲಿ ಅಸಾಮಾನ್ಯ ಪ್ರಪಂಚವನ್ನು ಕಟ್ಟಿಕೊಡುವ ಶೈಲಿ ಅನನ್ಯವಾಗಿದೆ ಎಂದು ಪ್ರಾಧ್ಯಾಪಕಿ, ಸಂಶೋಧಕಿ ಮತ್ತು ಲೇಖಕಿ ಪ್ರೊ.

ಡೊ.ಜಿತಾ ಲೋಬೊ ಅಭಿಪ್ರಾಯಪಟ್ಟರು.

ರೋಶು ಬಜ್ಪೆಅವರ 'ಪೇಯಿಂಗ್ ಗೆಸ್ಟ್ ಮತ್ತು ಇತರ ಕತೆಗಳು' ಕಥಾಸಂಕಲನನ್ನು ನಗರದ ಎಂಸಿಸಿ. ಬ್ಯಾಂಕ್‌ನ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಅತಿಥಿಗಳಾಗಿದ್ದರು. ಲೇಖಕ ರೋಶು ಬಜ್ಪೆಸ್ವಾಗತಿಸಿದರು. ಕಿಟಾಳ್ ಪ್ರಕಾಶನದ ಎಚ್ಚೆಮ್ ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿದರು.