'ಜೆಡಿಎಸ್'ಗೆ ಬಿಕ್ ಶಾಕ್: ನೆಲಮಂಗಲ ನಗರಸಭೆ ಅಧ್ಯಕ್ಷೆ ಸೇರಿ 11 ಮಂದಿ ಸದಸ್ಯರು ಕಾಂಗ್ರೆಸ್ ಪಕ್ಷ ಸೇರ್ಪಡೆ
ಬೆಂಗಳೂರು: ಚುನಾವಣೆ ಹೊತ್ತಿನಲ್ಲಿಯೇ ಜೆಡಿಎಸ್ ಪಕ್ಷಕ್ಕೆ ( JDS Party ) ಬಿಗ್ ಶಾಕ್ ಎನ್ನುವಂತೆ, ಇಂದು ನೆಲಮಂಗಲ ನಗರಸಭೆಯ 14 ಮಂದಿ ಜೆಡಿಎಸ್ ಸದಸ್ಯರಲ್ಲಿ ಅಧ್ಯಕ್ಷೆ ಸೇರಿದಂತೆ 11 ಮಂದಿ ಕಾಂಗ್ರೆಸ್ ಪಕ್ಷಕ್ಕೆ ( Congress Party ) ಸೇರ್ಪಡೆಯಾಗಿದ್ದಾರೆ.
ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ಗೃಹ ಕಚೇರಿಯಲ್ಲಿ, ನೆಲಮಂಗಲ ನಗರಸಭೆ ಜೆಡಿಎಸ್ ಅಧ್ಯಕ್ಷೆ, 10 ಸದಸ್ಯರ ಸಾಮೂಹಿಕ ಕಾಂಗ್ರೆಸ್ ಸೇರ್ಪಡೆಯಾದರು.
ಮಾಜಿ ವಿಧಾನ ಪರಿಷತ್ ಸದಸ್ಯ, ಬೆಮಲ್ ಕಾಂತರಾಜು, ಕೆಪಿಸಿಸಿ ಸದಸ್ಯರು ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್. ಶ್ರೀನಿವಾಸ್ ಇವರ ನೇತೃತ್ವದಲ್ಲಿ ನೆಲಮಂಗಲ ನಗರಸಭೆಯ ಜೆಡಿಎಸ್ನ ಹಾಲಿ ಅಧ್ಯಕ್ಷರು ಮತ್ತು 11 ಜನ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಪ್ರಮುಖ ಮುಖಂಡರು ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನೆಲಮಂಗಲ ನಗರಸಭೆಯಲ್ಲಿ 14 ಮಂದಿ ಜೆಡಿಸ್ ಸದಸ್ಯರಿದ್ದು, ಅವರಲ್ಲಿ 11 ಮಂದಿ ಕಾಂಗ್ರೆಸ್ ಗೆ ಬೆಷರತ್ ಸೇರ್ಪಡೆಯಾಗಿದ್ದಾರೆ.
ಹೀಗಿದೆ ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಸದಸ್ಯರ ಪಟ್ಟಿ
1.ಲತಾ ಹೇಮಂತ್ ಕುಮಾರ್, ಅಧ್ಯಕ್ಷರು
2.ರಾಜಮ್ಮ ಪಿಳ್ಳಪ್ಪ, ಸದಸ್ಯರು
3.ಆನಂದ್,ಸದಸ್ಯರು
5.ಆಂಜಿನಪ್ಪ,ಸದಸ್ಯರು
6.ಅಂಜನಮೂರ್ತಿ( ಪಾಪಣಿ),ಸದಸ್ಯರು
7.ದಾಕ್ಷಾಯಿಣಿ ರವಿ ಕುಮಾರ್, ಸದಸ್ಯರು
8.ಪ್ರಸಾದ್, ಸದಸ್ಯರು
9.ಚೇತನ್, ಸದಸ್ಯರು
10.ಪುಷ್ಪಲತಾ ಮಾರೇಗೌಡ, ಸದಸ್ಯರು
11.ಭಾರತಿ ಬಾಯಿ ನಾರಾಯಣ್ ರಾವ್, ಸದಸ್ಯರು