ಬೆಂಗಳೂರಲ್ಲಿ ಜ. 21 ರಂದು ಈ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ: ಬೆಸ್ಕಾಂ

ಬೆಂಗಳೂರಲ್ಲಿ ಜ. 21 ರಂದು ಈ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ: ಬೆಸ್ಕಾಂ

ಬೆಂಗಳೂರು, ಜನವರಿ 20: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ವತಿಯಿಂದ ನಗರದ ವಿವಿಧ ವಿದ್ಯುತ್ ವಿತರಣಾ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲಾಗಿದೆ. ಈ ಕಾರಣಕ್ಕೆ ಜನವರಿ 21 ರಂದು ಶನಿವಾರ ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

ಬೆಸ್ಕಾಂ ಹೊರಡಿಸಿರುವ ಪ್ರಕಟಣೆಯ ಪ್ರಕಾರ ನಗರದ ಹೃದಯ ಭಾಗದ ಬಡಾವಣೆಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬ ಸಂಫೂರ್ಣ ಮಾಹಿತಿ ಇಲ್ಲಿದೆ.ವಿದ್ಯುತ್ ಕಡಿತದ ಸ್ಥಳಗಳು: ಎಚ್‌ಎಸ್ ಆರ್ ಲೇಔಟ್ ದಕ್ಷಿಣ, ಚಂದ್ರಾಪುರ, ಚನ್ನಪಟ್ಟಣ ಟೌನ್ ಮತ್ತು ಗ್ರಾಮಾಂತರದ ಸಾತನೂರು ರಸ್ತೆ ಎಲೆಕ್ಟ್ರಾನಿಕ್ ಸಿಟಿ ಹಂತ-1, ನೀಲಾದ್ರಿ ರಸ್ತೆ, ಗೋಲಹಳ್ಳಿ, ಇಎಚ್‌ಟಿ ಇನ್ಫೋಸಿಸ್, ಹೆಬಗೋಡಿ, ವೀರಸಂದ್ರ ಮತ್ತು ಹುಲಿಮಂಗಲ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ ಪ್ರದೇಶಗಳು. ಪಶ್ಚಿಮ ಪೂರ್ವ ಮತ್ತು ದಕ್ಷಿಣ, ವಿಧಾನಸೌಧ, ಕಂಠೀರವ ಸ್ಟುಡಿಯೋ, ನಗರ ಮಾರುಕಟ್ಟೆ, ಆರ್‌.ಟಿ ರಸ್ತೆ, ಸಿಟಿ ರಸ್ತೆ, ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ನಗರರ್ತಪೇಟೆ, ಎಸ್‌.ಪಿ ರಸ್ತೆ ಸೇರಿದಂತೆ ಟೌನ್ ಹಾಲ್ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳ್ಳಿದೆ.

ಇಷ್ಟೇ ಅಲ್ಲದೇ ಜೆ.ಸಿ ರಸ್ತೆ, ಮಿನರ್ವ್‌ವೃತ್ತ, ಕೆಂಪೇಗೌಡ ರಸ್ತೆ, ಗಾಂಧಿನಗರ, ಮಸಿಡಿ, ಮೈಸೂರು ರಸ್ತೆ ಪೊಲೀಸ್ ಕ್ವಾರ್ಟರ್ಸ್, ಗೋರಿಪಾಳ್ಯ, ಬಿನ್ನಿಪೇಟೆ , ಚಾಮರಾಜಪೇಟೆ, ಎಎಂ ರಸ್ತೆ, ಕಲಾಸಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆ, ಶಂಕರಪುರಂ, ಡೆಂಟಲ್ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.