ಕಾಂಗ್ರೆಸ್ ಮಹಾ ಅಲೆ ಪ್ರಾರಂಭವಾಗಿದೆ: ಪ್ರಜಾಧ್ವನಿ ಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ಮಹಾ ಅಲೆ ಪ್ರಾರಂಭವಾಗಿದೆ: ಪ್ರಜಾಧ್ವನಿ ಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್

ಹಾವೇರಿ: ಜನರ ಧ್ವನಿ, ಭಾವನೆ , ಜನರ ಸಮಸ್ಯೆ, ನೋವು ಎಲ್ಲದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ನಿಮಗೆ ಶಕ್ತಿ ಕೊಡೋದೇ ಪ್ರಜಾಧ್ವನಿ ಯಾತ್ರೆ ಯಾತ್ರೆಯ ಉದ್ದೇಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಗುರುವಾರ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈಗ ಎಲ್ಲಾ ಕಡೆ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಹಾವೇರಿ ಕಾರ್ಯಕ್ರಮ ಬಹಳ ಉತ್ತಮವಾಗಿ ನಡೆಯಿತು.

ಪ್ರತಿ ದಿನ ಜನರ ಸಾಗರವಾಗಿ ಕಾಂಗ್ರೆಸ್ ಮಹಾ ಅಲೆ ಪ್ರಾರಂಭವಾಗಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಜನ ಪ್ರಾಣ ಕಳೆದುಕೊಂಡರು. ರೈತರ ಆದಾಯ ಡಬಲ್ ಮಾಡಲಿಲ್ಲ. ಅದಕ್ಕೆ ಜನ‌ ನಿಮಗೆ ಓಟ್ ಕೊಡಬೇಕಾ? ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಎಲ್ಲರಿಗೆ ಉದ್ಯೋಗ ಕೊಡಲು ಹೊಸ ಆರ್ಥಿಕ ನೀತಿ ಘೋಷಣೆ ಮಾಡಿ ಬಂದಿದ್ದೇವೆ. ನಮ್ಮ ಬಸವರಾಜ ಬೊಮ್ಮಾಯಿ ಸಾಹೇಬರು ಈ ಭೂಮಿಯವರು. ಬೊಮ್ಮಾಯಿ ಸಾಹೇಬ್ರೇ, ಯಡಿಯೂರಪ್ಪನವರು, ಜಗದೀಶ್ ಶೆಟ್ಟರ್, ಸದಾನಂದಗೌಡ ಸಿಎಂ ಆಗಿದ್ದರು.ಇದರಲ್ಲಿ ನಿಮ್ಮ ಭಾಗಕ್ಕೆ ಕೈಗಾರಿಕೆ ಕೊಡುತ್ತೇವೆ, ಉದ್ಯೋಗ ಕೊಡುತ್ತೇವೆ ಅಂತ ಬಂದಿದ್ದರು. ಪಟ್ಟಿ ಬಿಡುಗಡೆ ಮಾಡಿ ಎಂದರು.

ನಾವು ಸೋಲಾರ್, ವಿಂಡ್ ಮಿಲ್ ಎಲ್ಲಾ ಪ್ರಾರಂಭ ಮಾಡಿದೆವು.ಪಾವಗಡದಲ್ಲಿ 14,000 ಎಕರೆಯಲ್ಲಿ ವಿದ್ಯುತ್ ಉತ್ಪದನೆ ಮಾಡಿದೆವು. ನೀವು ಒಂದು ರೂಪಾಯಿ ಹಣ ಕೊಡಬೇಕಿಲ್ಲ, 200 ಯೂನಿಟ್ ಫ್ರೀ ವಿದ್ಯುತ್ ಕೊಡುತ್ತೇವೆ ಎಂದರು.

ಬಸವಣ್ಣನ ಆಣೆ, ಕುವೆಂಪು ಆಣೆ, ಕನಕದಾಸರ ಆಣೆ, ಶರೀಪರ ಆಣೆ 200 ಯುನಿಟ್ ಕರೆಂಟ್ ನಿಮ್ಮ ಮನೆಗೆ ಕೊಟ್ಟೇ ಕೊಡುತ್ತೇವೆ ಎಂದ ಅವರು, ಎಲ್ಲಿಂದ ತರ್ತಾರೆ ಕರೆಂಟ್ ಅಂತ ಸಚಿವ ಅಶೋಕ್ ಕೇಳ್ತಾರೆ, ಹಾಸ್ಪಿಟಲ್ ಬಿಲ್ ಕೊಡ್ತೇವೆ ಅಂತ ಕೋವಿಡ್ ಟೈಂ ನಲ್ಲಿ ಈ ಸರ್ಕಾರ ಹೇಳಿತ್ತು. ಅಂಥ ಸಂದರ್ಭದಲ್ಲಿಯೂ ಬೊಮ್ಮಾಯಿಯವರ ಕಣ್ಣು ತೆರೆಯಲಿಲ್ಲ. ನಾವು ಪ್ರತಿ ಮನೆ ಯಜಮಾನಿಗೆ 2000 ಕೊಡುತ್ತೇವೆ ಅಂತ ಘೋಷಣೆ ಮಾಡಿದ್ದೇವೆ.ಈಗ ಬೊಮ್ಮಾಯಿ‌ ನಾವು ಕೊಡುತ್ತೇವೆ ಅನ್ನುತ್ತಿದ್ದಾರೆ. ನಿಮ್ಮ ಚೇರ್ ಖಾಲಿ ಆಗುತ್ತಿರುವ ಬಜೆಟ್ ನಲ್ಲಿ ಕೊಡುತ್ತೀರಾ? ಎರಡು ತಿಂಗಳಾದ ಮೇಲೆ ನೀವು ಮಾಜಿ ಮುಖ್ಯಮಂತ್ರಿ ಎಂದರು.

ಪ್ರೈಮ್ ಮಿನಿಸ್ಟರ್ ಬಂದಿದ್ದಾರೆ. ಬಹಳ ಸಂತೋಷ. 40% ಕೆಂಪಣ್ಣ ಆರೋಪಕ್ಕೆ ಪ್ರಧಾನಿ ಉತ್ತರ ಕೊಡಲಿ.ಸರ್ಟಿಫಿಕೇಟ್ ಕೊಡ್ತಾರಂತೆ.ಸರ್ಟಿಫಿಕೇಟ್ ಆದರೂ ಕೊಡಲಿ, ಏನಾದರೂ ಕೊಡಲಿ ಎಂದು ಕಿಡಿ ಕಾರಿದರು.