ಬಿಜೆಪಿ ಅಧಿಕಾರಕ್ಕಾಗಿ ರಕ್ತದೋಕುಳಿ ಆಡಬೇಕಾ? -ಮಾಜಿ ಸಿಎಂ ಕುಮಾರಸ್ವಾಮಿ

ಬಿಜೆಪಿ ಅಧಿಕಾರಕ್ಕಾಗಿ ರಕ್ತದೋಕುಳಿ ಆಡಬೇಕಾ? -ಮಾಜಿ ಸಿಎಂ ಕುಮಾರಸ್ವಾಮಿ

ಬಿಜೆಪಿ ಅಧಿಕಾರಕ್ಕಾಗಿ ರಕ್ತದೋಕುಳಿ ಆಡಬೇಕಾ? ಸಾಮರಸ್ಯ ಕೆಡಿಸಿ ಬದುಕೋದಾದ್ರು ಎಷ್ಟು ದಿನ? ಹಿಂದೂಗಳ ಹೆಸರಿನಲ್ಲಿ ನಾಲ್ಕು ದಿನ ಅಧಿಕಾರ ಪಡಿಬಹುದು, ಇದು ಯಾರಿಗೂ ಶ್ರೇಯಸ್ಸು ತರೋದಿಲ್ಲ ಅಂತಾ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸರ್ವಜನಾಂಗದ ಶಾಂತಿಯ ತೋಟ. ಶಾಂತಿ ಕದಡಿಸಲು ಬಿಡಬೇಡಿ. ಸರ್ಕಾರ ಆರೂವರೆ ಕೋಟಿ ಜನರದ್ದು, ಹಾಗಾಗಿ ಎಲ್ಲರನ್ನೂ ಕಾಪಾಡಬೇಕು‌ ಎಂದ್ರು.

ಮುಂದುವರೆದು ಮುಸ್ಲಿಂರಿಗೆ ಹಿಂದೂ ದೇವಸ್ಥಾನಗಳಲ್ಲಿ ವ್ಯಾಪಾರ ಬ್ಯಾನ್ ವಿಚಾರವಾಗಿ ಮಾತನಾಡಿ, ಈ ರೀತಿ ವಾತಾವರಣದಿಂದ ಏನೂ ಸಾಧನೆ ಮಾಡ್ತೀರಿ? ಹಿಜಾಬ್ ತೀರ್ಪು ವಿಚಾರವಾಗಿ ಈಗಾಗಲೇ ಮುಸ್ಲಿಮರು ಬಂದ್ ಆಚರಣೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರ ರಕ್ತದ ಮೇಲೆ ನೀವು ಅಧಿಕಾರ ಮಾಡಬೇಕಾ? ದಿನನಿತ್ಯದ ಬಳಕೆ ವಸ್ತುಗಳು ಬೆಲೆ ಗಗನಕ್ಕೆ ಏರುತ್ತಿವೆ ಆ ಬಗ್ಗೆ ಗಮನ ಕೊಡಿ ಎಂದ್ರು .

ಇದೇ ವೇಳೆ ಕಾಂಗ್ರೆಸ್   ಪಾದಯಾತ್ರೆ ಬಗ್ಗೆಯೂ ಪ್ರಸ್ತಾಪ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಮಹಿಳೆಯರು ಹೋರಾಟ ಮಾಡಿದ್ರು. ಆಗ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ರೈತರನ್ನು ಹೊಡೆದು ಅಟ್ಟಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಯಾವ ನೈತಿಕತೆ ಇಟ್ಕೊಂಡು ಪಾದಯಾತ್ರೆ ಮಾಡತ್ತೆ ಅಂತಾ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದ್ರು.