ತಾಯಿಯ ಮೊಬೈಲ್‌ಗೆ ‌ಮೆಸೇಜ್ ಕಳುಹಿಸಿ ಹದಿಹರೆಯದ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ

ತಾಯಿಯ ಮೊಬೈಲ್‌ಗೆ ‌ಮೆಸೇಜ್ ಕಳುಹಿಸಿ ಹದಿಹರೆಯದ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ
ಸತ್ಯಮಂಗಲ ಬಡಾವಣೆಯ ಪ್ರಸಾದ್ ಮತ್ತು ಸುಬ್ಬಲಕ್ಷ್ಮಿ ಎಂಬುವವರ ಪುತ್ರಿ ಪೂರ್ವಿಕಾ. ತಾಯಿ ಮೊಬೈಲ್‌ಗೆ ‌ಮೆಸೇಜ್ ಕಳುಹಿಸಿ ಬೆಳಗಿನ ಜಾವ ಮನೆಯಿಂದ ಹೊರ ಹೋಗಿರುವ ವಿದ್ಯಾರ್ಥಿನಿ ಪೂರ್ವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹಾಸನ : ಹದಿಹರೆಯದ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹಾಸನದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪೂರ್ವಿಕಾ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಹಾಸನ ಹೊರವಲಯದ ಕೆರೆಯಲ್ಲಿ ಘಟನೆ ನಡೆದಿದೆ. ಸತ್ಯಮಂಗಲ ಬಡಾವಣೆಯ ಪ್ರಸಾದ್ ಮತ್ತು ಸುಬ್ಬಲಕ್ಷ್ಮಿ ಎಂಬುವವರ ಪುತ್ರಿ ಪೂರ್ವಿಕಾ. ತಾಯಿ ಮೊಬೈಲ್‌ಗೆ ‌ಮೆಸೇಜ್ ಕಳುಹಿಸಿ ಬೆಳಗಿನ ಜಾವ ಮನೆಯಿಂದ ಹೊರ ಹೋಗಿರುವ ವಿದ್ಯಾರ್ಥಿನಿ ಪೂರ್ವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 'ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನನ್ನು ಕ್ಷಮಿಸಿ' ಎಂದು ತಾಯಿ ಮೊಬೈಲ್ ಗೆ ಪೂರ್ವಿಕಾ ಮೆಸೇಜ್ ಮಾಡಿದ್ದಳು.

ಅಗ್ನಿಶಾಮಕ ದಳದಿಂದ ಬಾಲಕಿ ಶವಕ್ಕಾಗಿ ಶೋಧಕಾರ್ಯ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

.