ಸಿಲಿಕಾನ್ ಸಿಟಿ ಜನರೇ ಎಚ್ಚರ..! ಇಂದು ಆಟೋ ಸಿಗೋದು ಡೌಟು..ಚಾಲಕರಿಂದ ವಿಧಾನಸೌಧದ ಮುತ್ತಿಗೆ ಹಾಕಲು ಪ್ಲ್ಯಾನ್
ಬೆಂಗಳೂರು : ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆಯಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್ಗೆ ನೀಡಿದ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ಇಂದು ವಿಧಾನಸೌಧದ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.
ಸಿಲಿಕಾನ್ ಸಿಟಿ ಜನರೇ ಇಂದು ಆಟೋಗಳ ಸಂಚಾರ ಸ್ಥಗಿತ ಗೊಳಿಸಲಿದ್ದಾರೆ, ನೀವೆನಾದ್ರೂ ಆಟೋದಲ್ಲಿ ಓಡಾಡುತ್ತಿದ್ದರೆ ಎಚ್ಚರ ವಹಿಸೋದು ಅಗತ್ಯವಾಗಿದೆ.
ಆಟೋ ಚಾಲಕರೆಲ್ಲರೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ನಿಂದ ಬೆಳಿಗ್ಗೆ 11ಕ್ಕೆ ಬೃಹತ್ ಆಟೋ ರ‍್ಯಾಲಿ ಮಾಡಿ, ಎರಡು ಸಾವಿರ ಆಟೋಗಳ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರು ತಯಾರಿ ನಡೆಸಿದ್ದಾರೆ. ಈ ಪ್ರತಿಭಟನೆಗೆ 21 ಆಟೋ ಸಂಘಟನೆಗಳು ಈಗಾಗಲೇ ಸಾಥ್ ನೀಡಿವೆ.
ರಾಜಧಾನಿಯ ಎರಡು ಲಕ್ಷದ ಹತ್ತು ಸಾವಿರ ಆಟೋ ಚಾಲಕರು ಈಗಾಗಲೇ ಬೆಂಬಲ ನೀಡಿದ್ದಾರೆ. ಇದರಿಂದ ಇಂದು ರಾಜಧಾನಿಯಲ್ಲಿ ಸರಿಯಾದ ಸಮಯಕ್ಕೆ ಆಟೋಗಳು ಸಿಗುವುದಿಲ್ಲ. ಹಾಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ.