ಧಾರವಾಡದಲ್ಲೊಂದು ಜೈಲು ಮಾದರಿಯ ಫ್ಯಾಮಿಲಿ ರೆಸ್ಟೋರೆಂಟ್ ಓಪನ್ | Dharwad |
ಧಾರವಾಡದಲ್ಲೊಂದು ಜೈಲು ಮಾದರಿಯ ಸಸ್ಯಹಾರಿ ಹಾಗೂ ಮಾಂಸಾಹಾರಿ ಊಟವನ್ನು ಉಣಬಡಿಸುವ ರೆಸ್ಟೋರೆಂಟ್ ಓಪನ್ ಆಗಿದೆ. ಇದರ ವಿಶೇಷತೆ ಅಂದರೆ ನಿಮಗೆ ಸ್ವತಃ ಜೈಲಿನಲ್ಲೇ ಕುಳಿತು ಊಟ ಮಾಡಿದ ಅನುಭವವಾಗುತ್ತದೆ ಆದರೆ ಒಂದು ವ್ಯತ್ಯಾಸ ಅಂದ್ರೆ ನಿಮ್ಮ ಇಷ್ಟದ ಸ್ವಾದಿಷ್ಟಮಯ ಊಟವನ್ನು ಸವಿಯಬಹುದು. ಈ ರೆಸ್ಟೋರೆಂಟ್ನ ವಿಶೇಷ ಎಂದರೆ ರೆಸ್ಟೋರೆಂಟಿನ ಒಳಗಿನ ವಿನ್ಯಾಸವು ಜೈಲು ಮಾದರಿಯಲ್ಲಿದ್ದು, ಇಲ್ಲಿ ಮೆನು ತೆಗೆದುಕೊಳ್ಳುವವರಿಂದ ಹಿಡಿದು ಊಟ ಸರ್ವ್ ಮಾಡುವವರೆಗೂ ಪ್ರತಿಯೊಬ್ಬರು ಜೈಲಿನ ಉಡುಗೆಯಲ್ಲೇ ನಿಮ್ಮ ಸೇವೆಗೆ ಅಣಿಯಾಗಿರುತ್ತಾರೆ. ಕಂಬಿಗಳ ಮಧ್ಯೆಯಲ್ಲಿ ಪೊಲೀಸ್ ಗೊಂಬೆಗಳನ್ನು ಸಹ ನೀವು ಕಾಣಬಹುದು. ಹೌದು ಈ ವಿಭಿನ್ನ ಶೈಲಿಯ ಜೈಲಿನಂತೆಯೇ ಇರುವ ಈ ಫ್ಯಾಮಿಲಿ ರೆಸ್ಟೋರೆಂಟ್ ಹೆಸರೇ ‘ದ ಎಸ್ ಜೈಲು’. ಇಲ್ಲಿ ಸೀ ಫುಡ್, ಚೈನೀಸ್, ಭಾರತೀಯ ಫುಡ್, ಬಂಬೂ ಬಿರಿಯಾನಿ, ತಂದೂರಿ ಹೀಗೆ ವಿಭಿನ್ನ ಶೈಲಿಯ ಆಹಾರಗಳು ಸಿಗುತ್ತದೆ. ಇದು ಉತ್ತರ ಕರ್ನಾಟಕದಲ್ಲೇ ವಿಶೇ, ವಿಭಿನ್ನ ಪ್ರಥಮ ಪ್ರಯತ್ನವಾಗಿದ್ದು, ದ ಎಸ್ ಕೆಫೆ ಪಕ್ಕದಲ್ಲಿರುವ ಅಪೋಲೋ ಫಾರ್ಮಸಿ, ಟೋಲ್ನಕಾ ಧಾರವಾಡ ಎಂಬಲ್ಲಿದೆ. ಕುಟುಂಬ ಸಮೇತರಾಗಿ ಧಾವಿಸಿ ನಿಮಗೆ ಬೇಕಾದ ಆಹಾರವನ್ನು ಸವಿದು ಆನಂದಿಸಬಹುದು