ಉನ್ನತ ಶಿಕ್ಷಣ ಸಚಿವರು ರಾಜಿನಾಮೆ ನೀಡಲಿ

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಎದುರು ದೇಶದಲ್ಲಿ ಇಂಜನಿಯರಿಂಗ್ ಶಿಕ್ಷಣ ಪ್ರವೇಶಕ್ಕೆ ನಡೆಸಲ್ಪಡುವ ಜೆ.ಇ.ಇ.ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿತು. ಕೀರ್ತಿ ಗಣೇಶ್ ಮಾತನಾಡಿ ಇಂಜನಿಯರಿಂಗ್ ಪ್ರವೇಶ ಪರೀಕ್ಷೆಯ ಜೆ.ಇ.ಇ.ಪ್ರಮುಖ ಪ್ರಶ್ನೆ ಪತ್ರಿಕೆ ಬಹಿರಂಗವಾಗಿ ಮಾರಾಟವಾಗುತ್ತಿದೆ .ಇದ್ದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆನಾನುಕೂಲವಾಗಲಿದೆ .ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವುದಕ್ಕೆ ಉನ್ನತ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ಪ್ರಶ್ನೆ ಪತ್ರಿಕೆ ಬಹಿರಂಗದಲ್ಲಿ ಕೈವಾಡವಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಎನ್.ಎಸ್.ಯು.ಐ.ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಉಸ್ತುವಾರಿ ಏರಿಕೆ ಸ್ಪೀಫನ್ ಮತ್ತು ರಾಷ್ಟೀಯ ಸಂಚಾಲಕ ಮಹಮದ್ಮ ಫಹಾದ್ ,ಎನ್.ಎಸ್.ಯು.ಐ.ವಿದ್ಯಾರ್ಥಿ ಸಂಘಟನೆಯ ಮಾರುತಿ ,ಸುಹಾನ್ ಆಳ್ವ ,ಸೂರಜ್ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.