ಬಿಎಂಟಿಸಿ ಬಸ್‌ ಸಂಚಾರ ಚಿಕ್ಕಬಳ್ಳಾಪುರಕ್ಕೂ ವಿಸ್ತರಣೆ; ಎಚ್ಚೆತ್ತ ಕೆಎಸ್‌ ಆರ್‌ ಟಿಸಿ ಆಕ್ಷೇಪ

ಬಿಎಂಟಿಸಿ ಬಸ್‌ ಸಂಚಾರ ಚಿಕ್ಕಬಳ್ಳಾಪುರಕ್ಕೂ ವಿಸ್ತರಣೆ; ಎಚ್ಚೆತ್ತ ಕೆಎಸ್‌ ಆರ್‌ ಟಿಸಿ ಆಕ್ಷೇಪ

ಬೆಂಗಳೂರು: ಸದ್ಯ ಬಿಎಂಟಿಸಿ ಬಸ್‌ ಬೆಂಗಳೂರು ನಗರ , ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ಓಡಾಡುತ್ತಿತ್ತು. ಆದರೆ ಇದೀಗ ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿಬಸ್‌ ವಿಸ್ತರಣೆಯಾಗಿದೆ.

ಚಿಕ್ಕಬಳ್ಳಾಪುರ ಜನರ ಬೇಡಿಕೆಗೆ ಸ್ಪಂದಿಸಿ, BMTC ಬೋರ್ಡ್ ಅನುಮತಿ ನೀಡಿದ್ದಾರೆ.

ಆದ್ರೆ ಇದರಿಂದ ಎಚ್ಚೆತ್ತ ಕೆಎಸ್​ಆರ್​ಟಿಸಿ ಆಕ್ಷೇಪ ವ್ಯಕ್ತಪಡಿಸಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸುಮಾರು 60 ಕಿ.ಮೀ ಅಂತರವಿದೆ. ಹೀಗಾಗಿ ಬಸ್ ಸಂಚಾರ ವಿಸ್ತರಿಸಲು ಅವಕಾಶ ಇಲ್ಲ ಎಂದು ಕೆಎಸ್​​ಆರ್​ಟಿಸಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಬಿಎಂಟಿಸಿ ಸಂಚಾರಕ್ಕೆ ಅನುಮತಿ ಇದೆ. ಆದರೆ ಚಿಕ್ಕಬಳ್ಳಾಪುರಕ್ಕೂ ಸಂಚಾರ ವಿಸ್ತರಣೆ ಮಾಡಿರುವ ಹಿನ್ನಲೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕೆಎಸ್​ಆರ್​ಟಿಸಿ ಅಧಿಕಾರಿಗಳು BMTC ನಡೆ ಖಂಡಿಸಿ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಎಂಟಿಸಿ ಸಂಚಾರ ಮಾಡಿದರೆ KSRTCಗೆ ಆದಾಯಕ್ಕೆ ಹೊಡೆತ ಬೀಳುವ ಭೀತಿ ಹಿನ್ನಲೆ ಪತ್ರ ಬರೆಯಲು ಮುಂದಾಗಿದ್ದಾರೆ.