ಪ್ರಯಾಣಿಕ'ರಿಗೆ ಗುಡ್ ನ್ಯೂಸ್: ಮೊದಲ ಬಾರಿಗೆ ರಸ್ತೆಗಿಳಿಯಲಿವೆ 'ಬಿಎಸ್6 ಮಾದರಿಯ ಬಸ್'

ಪ್ರಯಾಣಿಕ'ರಿಗೆ ಗುಡ್ ನ್ಯೂಸ್: ಮೊದಲ ಬಾರಿಗೆ ರಸ್ತೆಗಿಳಿಯಲಿವೆ 'ಬಿಎಸ್6 ಮಾದರಿಯ ಬಸ್'

ಬೆಂಗಳೂರು: ಇದುವರೆಗೆ ಬೆಂಗಳೂರಿನ ಬಿಎಂಟಿಸಿ ಸಂಸ್ಥೆಗೆ ಹಲವು ಮಾದರಿಯ ಬಸ್ ಗಳು ಸೇರ್ಪಡೆಗೊಂಡಿವೆ. ಇದೀಗ ಮತ್ತೊಂದು ಹೆಜ್ಜೆ ಎನ್ನುವಂತೆ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಬಿಎಂಟಿಸಿಯು ಬಿಎಸ್6 ಮಾದರಿಯ ಬಸ್ ಗಳನ್ನು ಖರೀದಿಸಿದ್ದು, ಬೆಂಗಳೂರಿನ ಪ್ರಯಾಣಿಕರನ್ನು ಹೊತ್ತು ಸಾಗೋದಕ್ಕೆ ಸಿದ್ಧಗೊಂಡಿವೆ.

ಈ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಬೆಂ.ಮ.ಸಾ.ಸಂಸ್ಥೆಯು ( BMTC ) ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ BS VI ವಾಹನವನ್ನು ( BMTC BS VI Bus ) ಖರೀದಿಸಲು ಮುಂದಾಗಿದ್ದು, ಈ ವಾಹನಗಳು ಅತೀ ಶೀಘ್ರದಲ್ಲಿಯೇ ಬೆಂ.ಮ.ಸಾ.ಸಂಸ್ಥೆಗೆ ಸೇರ್ಪಡೆಗೊಳ್ಳಲಿವೆ. ದಿನಾಂಕ 13.11.2021 ಅಂದು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಮೊದಲ ಮಾದರಿಯ BS VI ಬಸ್ಸನ್ನು ಪರಿವೀಕ್ಷಣೆ ಮಾಡಿದರು.

ಬೆಂ.ಮ.ಸಾ.ಸಂಸ್ಥೆಯು BS VI ಮಾದರಿಯ ಒಟ್ಟು 565 ಬಸ್ಸುಗಳನ್ನು M/s Ashok Leyland Pvt. Ltd ರವರಿಂದ ಖರೀದಿಸಲು ಕಾರ್ಯಾದೇಶ ನೀಡದ್ದು, ಅದರಂತೆ ಎಲ್ಲಾ ಬಸ್ಸುಗಳನ್ನು ಫೆಬ್ರುವರಿ 2022 ರೊಳಗಾಗಿ ಬೆಂ.ಮ.ಸಾ.ಸಂಸ್ಥೆಗೆ ಪೂರೈಸಲಿದ್ದಾರೆ. ಈ ಬಸ್ಸುಗಳನ್ನು 2017-18 ರಲ್ಲಿ ಬಸ್ಸುಗಳ ಖರೀದಿಗಾಗಿಯೇ ಮೀಸಲಿಟ್ಟಿರುವ ಹಣದಿಂದ ಖರೀದಿಸಲಾಗುತ್ತಿದೆ.

ಈ ಹೊಸದಾಗಿ ಸೇರ್ಪಡೆಗೊಳ್ಳಲಿರುವ BS VI ವಾಹನಗಳು ಕೆಳಕಂಡ ವೈಶಿಷ್ಟ್ಯ ಗಳನ್ನು ಹೊಂದಿರುತ್ತದೆ

1.ಇದು ಪರಿಸರ ಸ್ನೇಹಿಯಾಗಿದ್ದು ಗಾಳಿಯ ಗುಣಮಟ್ಟವನ್ನು ಸುಧಾರಿಸಿ, ವಾತಾವರಣದ ಮಾಲಿನ್ಯವನ್ನು ಕಡಿಮೆಗೊಳಿಸುತ್ತದೆ.
2. ಈ ವಾಹನವು BS IV ವಾಹನಗಳಿಗಿಂತ ಹೆಚ್ಚಿನ Engine ಸಾಮರ್ಥ್ಯವನ್ನು ಹೊಂದಿರುತ್ತದೆ (197HP).
3.ಈ ವಾಹನಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕೊಡುವ ವ್ಯವಸ್ಥೆ ಇರುತ್ತದೆ.

K