ಮತ್ತೆ ಏರಿಕೆ ಕಂಡ ಚಿನ್ನದ ದರ : ಇಂದು ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ನೋಡಿ.
ಮತ್ತೆ ಏರಿಕೆ ಕಂಡ ಚಿನ್ನದ ದರ : ಇಂದು ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ನೋಡಿ.
ಬೆಂಗಳೂರು: ದೇಶದಲ್ಲಿ ಚಿನ್ನದ ಆಭರಣಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ ₹4,664 ದಾಖಲಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹45,450 ರೂ ಮತ್ತು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹49,590 ರೂಪಾಯಿ ದಾಖಲಾಗಿದೆ.
ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹74,000 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹74,000 ಇದೆ.
ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು: ₹45,450 (22 ಕ್ಯಾರಟ್) ₹49,590 (24 ಕ್ಯಾರಟ್), ಚೆನ್ನೈ: ₹45,830 (22 ಕ್ಯಾರಟ್) ₹50,000 (24 ಕ್ಯಾರಟ್) ಮತ್ತು ದೆಹಲಿಯಲ್ಲಿ ₹46,810 (22 ಕ್ಯಾರಟ್), ₹50,710 (24 ಕ್ಯಾರಟ್) ದಾಖಲಾಗಿದೆ.
ಮಂಗಳೂರು: ₹45,450 (22 ಕ್ಯಾರಟ್) ₹49,590 (24 ಕ್ಯಾರಟ್), ಮುಂಬಯಿ: ₹45,640(22 ಕ್ಯಾರಟ್), ₹46,640 (24 ಕ್ಯಾರಟ್) ಮತ್ತು ಮೈಸೂರು: ₹45,450 (22 ಕ್ಯಾರಟ್) ₹49,590 (24 ಕ್ಯಾರಟ್) ದಾಖಲಾಗಿದೆ.