ಇಂದಿನಿಂದ 'ನೋ ಮನಿ ಫಾರ್ ಟೆರರ್' ಸಮಾವೇಶ

ಇಂದಿನಿಂದ 'ನೋ ಮನಿ ಫಾರ್ ಟೆರರ್' ಸಮಾವೇಶ

ನವದೆಹಲಿ: ಪಾಕಿಸ್ತಾನವನ್ನು ಹೊರತುಪಡಿಸಿ ಸುಮಾರು 78 ದೇಶಗಳು ಮತ್ತು ಜಾಗತಿಕ ಸಂಸ್ಥೆಗಳು ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಯೋಜಿಸಲಾಗಿರುವ 'ನೋ ಮನಿ ಫಾರ್ ಟೆರರ್' ಸಮಾವೇಶದ ಮೂರನೇ ಆವೃತ್ತಿಯಲ್ಲಿ ಭಾಗವಹಿಸಲಿವೆ. ಪ್ರಧಾನಿ ನರೇಂದ್ರ ಮೋದಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಹಾನಿರ್ದೇಶಕ (ಡಿಜಿ) ದಿನಕರ್ ಗುಪ್ತಾ ತಿಳಿಸಿದ್ದಾರೆ.