ಅದ್ಧೂರಿ ನಾಡಹಬ್ಬ ಆಚರಣೆ
ಸವದತ್ತಿ
ಸವದತ್ತಿ ತಾಲೂಕು ಮುನವಳ್ಳಿ ನಾಡಹಬ್ಬ ಉತ್ಸವ ಸಮಿತಿ, ಮುನವಳ್ಳಿ ಅವರ ಆಶ್ರಯದಲ್ಲಿ 21ನೇ ವರ್ಷದ ನಾಡವನ್ನು ಇದೇ 10ರಂದು ಭಾರಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಮಾರಂಭವನ್ನು ಕರ್ನಾಟಕ ವಿಧಾನಸಭೆ ಉಪಸಭಾಧ್ಯಕ್ಷರಾದ ಆನಂದ ಚಂದ್ರಶೇಖರ ಮಾಮನಿ ಇವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು. ಈ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಮುಂದಿನ ದಿನಗಳಲ್ಲಿ ಉತ್ಸವವನ್ನು ಇನ್ನೂ ಅದ್ದೂರಿಯಾಗಿ ನಡೆಸಲು ನೆರವು ನೀಡುವುದಾಗಿ ಭರವಸೆ ನೀಡಿದರು.ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಮುರುಗೇಂದ್ರ ಮಹಾಸ್ವಾಮಿಗಳು, ಶ್ರೀ ಸೋಮಶೇಖರ ಮಠ ಮುನವಳ್ಳಿ, ಇವರು ಆಶೀರ್ವಚನ ನೀಡಿದರು. ಇದೇ ವೇಳೆ ನಾಡಿನ ಗಣ್ಯರಿಗೆ, ಸಾಧಕರಿಗೆ, ದಾನಿಗಳಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಲಾಯಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಹುಬ್ಬಳ್ಳಿಯ ವಿದುಷಿ ಡಾ. ಸಹನಾ ಭಟ್ ಅವರ ಶಿಷ್ಯಂದಿರಾದ ಕುಮಾರಿ ರಕ್ಷಾ ರಾವ್, ದೀಕ್ಷಾ ರಾವ್ ಹಾಗೂ ರಶ್ಮಿಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಕುಮಾರಿ ನಂದಿತಾ ಹಾಗೂ ಸಾಕ್ಷಿ ಇವರಿಂದ ಗಾಯನ ಕಾರ್ಯಕ್ರಮ ಸಹ ನಡೆಯಿತು ಈ ಸಂದರ್ಭದಲ್ಲಿ ಮುನವಳ್ಳಿಯ ಎಲ್ಲಾ ಗಣ್ಯರು, ಸಮಿತಿಯ ಪದಾಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು.