ವಿಧಾನ ಪರಿಷತ್ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲ್ಸುತ್ತಾರೆ,ಈಶ್ವರ್ ಖಂಡ್ರೆ
ವಿಧಾನ ಪರಿಷತ್ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಕಳೆದ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ವಿಜಯ್ ಸಿಂಗ್ ಪ್ರಚಂಡ ಬಹುಮತದಿಂದ ಗೆದಿದ್ರು ಕೇಂದ್ರ ಹಾಗೂ ರಾಜ್ಯ ಬಿಜೆಪಿಯ ದುರಾಡಳಿತ ವಿರುದ್ಧ ಜನ್ರು ರೊಚ್ಚಿಗೆದ್ದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಬೀದರನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಗಾಗಲೇ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜನ್ರು ಪಾಠ ಕಲಿಸಿದ್ದಾರೆ. ಗುತ್ತಿಗೆದಾರರ ಸಂಘದವರೆ ರಾಷ್ಟ್ರಪತಿಗೆ ಹಾಗೂ ಪ್ರಧಾನಿ ಕಚೇರಿಗೆ ಆಡಳಿತದಲ್ಲಿ 40ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪತ್ರ ಬರೆದಿದ್ದಾರೆ. ಜನ್ರಿಗೆ ಮನವಿ ಮಾಡುತ್ತೆನೆ ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಶಾಸ್ತ್ರೀಯಾಗಿ ಹೆದರಿಕೆ ಮೂಡಬೇಕು ಎಂದರು. ಗ್ರಾಪಂ ಸದಸ್ಯರಿಗೆ 10 ಸಾವಿರ ಗೌರವ ಧನ ನೀಡುತ್ತೆವೆ ನಳೀನ್ ಕುಮಾರ್ ಕಟೀಲು ಹೇಳಿಕೆ ವಿಚಾರವಾಗಿ, ನಿಮ್ಮಗೆ ಮಾನ ಮರ್ಯಾದೆ ಹಾಗೂ ನೈತಿಕತೆ ಇದೆ. ಗ್ರಾಪಂ ಚುನಾವಣೆಯಾಗಿ 10 ತಿಂಗಳಾಯ್ತು, ಇಲ್ಲಿಯವರೆಗೆ ಗ್ರಾಪಂ ಸದಸ್ಯರಿಗೆ ಗೌರವ ಧನ ಬಿಡುಗಡೆ ಮಾಡಿಲ್ಲಾ. ಸ್ಥಳೀಯ ಸಂಸ್ಥೆಗಳ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಸುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.