ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಲಿದೆ: ಮುಕೇಶ್ ಅಂಬಾನಿ
ಮುಂದಿನ ದಿನಗಳಲ್ಲಿ ಭಾರತ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಪಂಡಿತ್ ದೀನದಯಾಳ್ ವಿವಿಯಲ್ಲಿ ಮಾತನಾಡಿದ ಅವರು, "ಪ್ರಸ್ತುತ 3 ಕೋಟಿ ಡಾಲರ್ ಆರ್ಥಿಕತೆ ಹೊಂದಿರುವ ಭಾರತ, 2047ರ ವೇಳೆಗೆ 40 ಲಕ್ಷ ಕೋಟಿ ಡಾರಲ್ ಆರ್ಥಿಕತೆ ಹೊಂದಲಿದೆ. ಈ ಮೂಲಕ ಟಾಪ್ 3ನೇ ಸ್ಥಾನಕ್ಕೇರಲಿದೆ. ಭಾರತವು, ಶುದ್ಧ ಇಂಧನ, ಜೈವಿಕ ಇಂಧನ & ಡಿಜಿಟಲ್ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.