ವಾಹನದ ದಾಖಲೆ ಕೇಳಿದ್ದಕ್ಕೆ ಟ್ರಾಫಿಕ್​​ ASI ಕೈ ಕಚ್ಚಿದ ಭೂಪ​..!

ವಾಹನದ ದಾಖಲೆ ಕೇಳಿದ್ದಕ್ಕೆ ಟ್ರಾಫಿಕ್​​ ASI ಕೈ ಕಚ್ಚಿದ ಭೂಪ​..!

ವಾಹನದ ದಾಖಲೆ ತೋರಿಸು ಎಂದು ಕೇಳಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್​ ಪೊಲೀಸ್​ ಸಹಾಯಕ ಸಬ್​ ಇನ್​ಸ್ಪೆಕ್ಟರ್​ ಮೇಲೆಯೇ ಹಲ್ಲೆ ನಡೆಸಿದ ಘಟನೆಯು ರೋಹಿಣಿ ಎಂಬಲ್ಲಿ ನಡೆದಿದೆ. 30 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಪಿಯೂಷ್​ ಬನ್ಸಾಲ್​ ಎಂದು ಗುರುತಿಸಲಾಗಿದೆ.

ಈತ ದೆಹಲಿಯ ಪೀತಾಂಪುರ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಿಯೂಷ್​ ವಾಹನವನ್ನು ಅಡ್ಡಗಟ್ಟಿದ ಟ್ರಾಫಿಕ್​ ಪೊಲೀಸ್​ ವಾಹನದ ದಾಖಲೆ ತೋರಿಸುವಂತೆ ಕೇಳಿದ್ದಾರೆ. ಆದರೆ ಈತ ಪೊಲೀಸರಿಗೆ ವಾಹನದ ದಾಖಲೆ ಪತ್ರಗಳನ್ನು ತೋರಿಸೋದನ್ನು ಬಿಟ್ಟು ವಾದಕ್ಕೆ ಇಳಿದಿದ್ದಾನೆ. ವಾದ ತಾರಕಕ್ಕೆ ಏರುತ್ತಿದ್ದಂತೆಯೇ ಆರೋಪಿ ಪಿಯೂಷ್​ ಎಎಸ್​ಐ ಕೆನ್ನೆಗೆ ಬಾರಿಸಿದ್ದು ಮಾತ್ರವಲ್ಲದೇ ಅವರ ಬೆರಳನ್ನು ಕಚ್ಚಿದ್ದಾನೆ ಎಂದು ತಿಳಿದು ಬಂದಿದೆ. ಬುಧವಾರ ಈ ಘಟನೆ ಸಂಭವಿಸಿದ್ದು ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.