ಚಿನ್ನದ ಪದಕ ಗೆದ್ದ ಅವನಿಯನ್ನ ಅಭಿನಂದಿಸಿದ ಮೋದಿ

ದೆಹಲಿ: ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ ಎಚ್ 1 ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಅವನಿ ಲೇಖಾರಾ ಚಿನ್ನದ ಪದಕ ಗೆದ್ದಿದ್ದು, ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಅಸಾಧಾರಣ ಪ್ರದರ್ಶನ| ಚಿನ್ನದ ಪದಕಕ್ಕೆ ಅರ್ಹರಾದ ನಿಮಗೆ ಅಭಿನಂದನೆಗಳು. ನಿಮ್ಮ ಶ್ರಮ ಮತ್ತು ಶೂಟಿಂಗ್ ಕಡೆಗಿನ ಉತ್ಸಾಹದಿಂದ ಇದು ಸಾಧ್ಯವಾಗಿದೆ. ಭಾರತೀಯರಿಗೆ ಇದು ನಿಜಕ್ಕೂ ವಿಶೇಷ ಕ್ಷಣ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು' ಎಂದಿದ್ದಾರೆ.
ಇಂದು ಬೆಳಗ್ಗೆ ಮುಗಿದ ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ ಎಚ್ 1 ಪಂದ್ಯದಲ್ಲಿ 19 ವರ್ಷದ ಅವನಿ ಲೇಖಾರಾ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ 2021ರ ಪ್ಯಾರಲಿಂಪಿಕ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾದಿದ್ದಾರೆ. ಪ್ಯಾರಲಿಂಪಿಕ್ ನಲ್ಲಿ ಇದುವರೆಗೆ ಚಿನ್ನ ಗೆದ್ದ ಭಾರತೀಯ ಆಟಗಾರರಲ್ಲಿ ಅವನಿ ನಾಲ್ಕನೆಯವರಾಗಿದ್ದಾರೆ.