ಈ ಬಾರಿ ಕಾಂಗ್ರೆಸ್‌ನ್ನು ಹೆಸರಿಲ್ಲದಂತೆ ಮಾಡಬೇಕು: ಸಿಎಂ ಬೊಮ್ಮಾಯಿ

ಈ ಬಾರಿ ಕಾಂಗ್ರೆಸ್‌ನ್ನು ಹೆಸರಿಲ್ಲದಂತೆ ಮಾಡಬೇಕು: ಸಿಎಂ ಬೊಮ್ಮಾಯಿ

ಚಿತ್ರದುರ್ಗ: ಗುಜರಾತ್‌‌, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತದೆ. ಇದು ಕರ್ನಾಟಕದ ಚುನಾವಣೆಗೆ ಮುನ್ನುಡಿಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಜನ ವಿರೋಧಿ, ಅಭಿವೃದ್ದಿ ವಿರೋಧಿ, ಭ್ರಷ್ಟಚಾರದ ಪರವಾಗಿರುವ ಹಿಂದುಳಿದ, ಪರಿಶಿಷ್ಟ ವರ್ಗದ ಜನರ ವಿರೋಧಿಯಾಗಿರುವ ಕಾಂಗ್ರೆಸ್‌ ಅನ್ನು ಈ ಬಾರಿ ಹೆಸರಿಲ್ಲದಂತೆ ಮಾಡಬೇಕು. ಇಷ್ಟು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಮೀಸಲಾತಿ ನೀಡದೇ ಈಗ ಮಾತನಾಡುತ್ತಿದೆ ಎಂದಿದ್ದಾರೆ.