ವಾಯವ್ಯ ಟರ್ಕಿಯಲ್ಲಿ 5.9 ತೀವ್ರತೆಯ ಭೂಕಂಪ !
ವಾಯುವ್ಯ ಟರ್ಕಿಯ ಪಟ್ಟಣದಲ್ಲಿ ಬುಧವಾರ ಮುಂಜಾನೆ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದು ಟರ್ಕಿಯ ಸರ್ಕಾರ ನಡೆಸುತ್ತಿರುವ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ ತಿಳಿಸಿದೆ. ಇಸ್ತಾನ್‌ಬುಲ್‌ನಿಂದ ಪೂರ್ವಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ಡಜ್ ಪ್ರಾಂತ್ಯದ ಗೋಲ್ಕಯಾ ಪಟ್ಟಣದಲ್ಲಿ, ಭೂಮಿಯಿಂದ 2 ಕಿಮೀ ಆಳದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದಾಗಿ ಜನರು ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ.