ನ್ಯಾಷನಲ್‌ ಪಾಪ್ಯುಲೇಶನ್‌ ರಿಜಿಸ್ಟರ್‌ ನವೀಕರಿಸಬೇಕಾಗಿದೆ ಎಂದು ತನ್ನ ವರದಿಯಲ್ಲಿ ಹೇಳಿದ ಕೇಂದ್ರ ಗೃಹ ಸಚಿವಾಲಯ

ನ್ಯಾಷನಲ್‌ ಪಾಪ್ಯುಲೇಶನ್‌ ರಿಜಿಸ್ಟರ್‌ ನವೀಕರಿಸಬೇಕಾಗಿದೆ ಎಂದು ತನ್ನ ವರದಿಯಲ್ಲಿ ಹೇಳಿದ ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ: ಜನನ, ಮರಣ ಮತ್ತು ವಲಸೆಯಿಂದ ಉಂಟಾಗಿರುವ ಬದಲಾವಣೆಗಳನ್ನು ಸೇರ್ಪಡೆಗೊಳಿಸುವ ಉದ್ದೇಶದಿಂದ ನ್ಯಾಷನಲ್‌ ಪಾಪ್ಯುಲೇಶನ್‌ ರಿಜಿಸ್ಟರ್‌ ಅನ್ನು ನವೀಕರಿಸುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಬಿಡುಗಡೆಗೊಳಿಸಿದ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ನ್ಯಾಷನಲ್‌ ಪಾಪ್ಯುಲೇಶನ್‌ ರಿಜಿಸ್ಟರ್‌ ಅನ್ನು 2010 ರಲ್ಲಿ ಮೊದಲು ತಯಾರಿಸಲಾಗಿದ್ದರೆ 2015 ರಲ್ಲಿ ಅದನ್ನು ನವೀಕರಿಸಲಾಗಿತ್ತು, ಜೊತೆಗೆ ಇದರ ಭಾಗವಾಗಿ ಆಧಾರ್‌, ಮೊಬೈಲ್‌ ಮತ್ತು ರೇಷನ್‌ ಕಾರ್ಡ್‌ ಸಂಖ್ಯೆಗಳನ್ನೂ ಸಂಗ್ರಹಿಸಲಾಗಿತ್ತು.

ಈ ರಿಜಿಸ್ಟರ್‌ ಅನ್ನು ಅಸ್ಸಾಂ ಹೊರತುಪಡಿಸಿ ಇತರೆಡೆಗಳಲ್ಲಿ ಎಪ್ರಿಲ್‌ 2020 ರಿಂದ ಸೆಪ್ಟೆಂಬರ್‌ 2020 ರ ನಡುವೆ 2021 ರ ಜನಗಣತಿಗಾಗಿ ಮನೆಗಳ ಎಣಿಕೆ ಸಂದರ್ಭ ನವೀಕರಿಸುವ ಉದ್ದೇಶವಿತ್ತಾದರೂ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಸಾಧ್ಯವಾಗಿರದೇ ಇದ್ದುದರಿಂದ ಮುಂದೂಡಲಾಗಿತ್ತು ಎಂದು ಸಚಿವಾಲಯ ತನ್ನ 2021-22 ವರದಿಯಲ್ಲಿ ತಿಳಿಸಿದೆ.

ವೆಬ್‌ ಪೋರ್ಟಲ್‌ ಮೂಲಕ ಕೆಲವೊಂದು ದೃಢೀಕರಣ ಪ್ರೊಟೋಕಾಲ್‌ ಅನುಸರಿಸಿ ಡೇಟಾ ಅಪ್‌ಡೇಟ್‌ ಮಾಡಲು ನಾಗರಿಕರಿಗೆ ಅನುವು ಮಾಡಿಕೊಡಲು ಸರಕಾರ ಉದ್ದೇಶಿಸಿದೆ ಎಂದು ಸಚಿವಾಲಯ ತಿಳಿಸಿದೆ. ಈ ಕಾರ್ಯಕ್ಕಾಗಿ ರೂ 3941.35 ಕೋಟಿ ಒದಗಿಸಲು ಸರಕಾರ ಈಗಾಗಲೇ ಒಪ್ಪಿದೆ ಎಂದು ಸಚಿವಾಲಯ ಹೇಳಿದೆ.

ಅಖಿಲ ಭಾರತ ಮಟ್ಟದ ನ್ಯಾಷನಲ್‌ ರಿಜಿಸ್ಟರ್‌ ಆಫ್‌ ಸಿಟಿಜನ್ಸ್‌ ರಚನೆಯಲ್ಲಿ ನ್ಯಾಷನಲ್‌ ಪಾಪ್ಯುಲೇಶನ್‌ ರಿಜಿಸ್ಟರ್‌ ಮೊದಲ ಹೆಜ್ಜೆಯಾಗಿದೆ.