ಯುಗಾದಿ 2023: ತುಲಾ ರಾಶಿಯವರಿಗೆ ಬೆಟ್ಟದಂತೆ ಬಂದ ಕಷ್ಟ ಮಂಜಿನಂತೆ ಕರಗುವುದು

ಯುಗಾದಿ ಹಬ್ಬವನ್ನು ಇದೇ ಮಾರ್ಚ್ 22ರಂದು ಆಚರಿಸಲಾಗುತ್ತದೆ. ಈ ವರ್ಷ ದ್ವಾದಶಿ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದದೆ ತುಲಾ ರಾಶಿವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಗ್ರಹ ಅನುಗ್ರಹವನ್ನು ತುಲಾರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ.
ತುಲಾ: ವೃತ್ತಿ ಜೀವನ
ಪಂಚಮ ಶನಿಯಿಂದಾಗಿ ನಿಮ್ಮ ಉದ್ಯೋಗದಲ್ಲಿ ಕೆಲ ಸಮಸ್ಯೆಗಳು ಉಂಟಾಗುತ್ತವೆ. ಕೊಂಚ ಆಸಕ್ತಿ ಕಡಿಮೆ ಆಗುವುದು. ಕುಟುಂಬದಲ್ಲಿ ಸಮಸ್ಯೆ, ಆರ್ಥಿಕ ಜೀವನದಲ್ಲಿ ಸಮಸ್ಯೆ ಆಗುತ್ತದೆ. ಲಾಭ ಬಂದರೂ ಪ್ರಯೋಜನವಾಗುವುದುಇಲ್ಲ. ಹಣ ಬರುವುದು ನಿಧಾನ ಆಗುತ್ತದೆ. ರಾಜಯೋಗ ಯೋಗ ಕೊಡುವ ಶನಿ ನಿಮಗೆ ಬರಬೇಕಾದ ಹಣವನ್ನು ತಡೆಯುತ್ತಾನೆ.
ಯಾವುದೇ ಪಲಿತಾಂಶವನ್ನು ತಡೆ ಹಿಡಿದು ನಿಧಾನ ಮಾಡುತ್ತಾನೆ. ಈ ರೀತಿ ಫಲವನ್ನು ಶನಿ ಕೊಡುತ್ತಾನೆ. ಸ್ವಂತ ಉದ್ಯೋಗ ಮಾಡುವಂತವರಿಗೆ ಆದಾಯ ಮತ್ತು ಖರ್ಚು ಎರಡೂ ಸರಿಸಮನಾಗಿರುತ್ತದೆ. ವಿಶೇಷವಾಗಿ ಉಳಿತಾಯ ಸಾಧ್ಯವಾಗುವುದಿಲ್ಲ.
ತುಲಾ: ಕೌಟುಂಬಿಕ ಜೀವನ
ಗುರು ತುಲಾ ರಾಶಿಯವರಲ್ಲಿನ ಮನಸ್ತಾಪ, ಭಿನ್ನಾಭಿಪ್ರಾಯ, ತಪ್ಪು ತಿಳುವಳಿ ದೂರ ಮಾಡುತ್ತಾನೆ. ಹಣಕಾಸಿನ ವಿಚಾರದಲ್ಲಿ ತುಂಬಾ ಕಷ್ಟವಾದಾಗ ನಿಮ್ಮ ಸಂಬಂಧಿಕರು, ಸ್ನೇಹಿತರು, ಬಂಧುಗಳಿಂದ ನಿಮಗೆ ಸಹಾಯ ಸಿಗುತ್ತದೆ. ಇದರಿಂದ ಸಮಸ್ಯೆಗಳಿಗೆ ಹೆಚ್ಚು ಒಳಗಾಗುವುದು ತಪ್ಪುತ್ತದೆ. ಇದರಿಂದ ನಿಮ್ಮ ಜೀವನದ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ.
ಕೆಲವೊಮ್ಮೆ ಸಂಬಂಧಿಕರಲ್ಲೇ ಹಣದ ಸಮಸ್ಯೆಗಳು ಎದುರಾಗಬಹುದು. ಇದರ ನಿವಾರಣೆ ನೀವು ಕಷ್ಟ ಪಡಬೇಕಾಗುತ್ತದೆ. ತುಂಬಾ ತಾಳ್ಮೆ, ಯೋಚನೆ ಈ ಮಸಯದಲ್ಲಿ ಮುಖ್ಯವಾಗುತ್ತದೆ. ಯಾರೊಂದಿಗೂ ವಾದಕ್ಕಿಳಿಯಬೇಡಿ. ಯಾಕೆಂದರೆ ಶತ್ರುಗಳೇ ನಿಮಗೊಂದು ದಿನ ಸಹಾಯಕ್ಕೆ ಬರಬಹುದು. ಇದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.
ಇಷ್ಟು ದಿನ ತುಲಾ ರಾಶಿಯಲ್ಲಿ ಕೇತು ಇತ್ತು. ಸಪ್ತಮದಲ್ಲಿ ರಾಹು, ಚಥುರ್ತ ಭಾಗದಲ್ಲಿ ಶನಿ, ಗುರು ಆರನೇ ಮನೆಯಲ್ಲಿ(ಮೀನ) ಸ್ಥಿತನಾಗಿದ್ದ. ಆದರೆ ಈ ವರ್ಷದಲ್ಲಿ ತುಲಾ ರಾಶಿಯರಲ್ಲಿ ಕೆಲ ಬದಲಾವಣೆಗಳಾಗುತ್ತದೆ. ತುಲಾ ರಾಶಿಯವರಿಗೆ ಪಂಚಮ ಶನಿ ನಡೆಯುತ್ತಿದೆ. ಪಂಚಮ ಶನಿ, ಅಷ್ಟಮ ಶನಿ, ಸಾಡೇಸಾತ್ ಶನಿ ಬಂದ ರಾಶಿಗೆ ಗುರು ದೃಷ್ಟಿ ಇದ್ದರೆ ಸಂಕಷ್ಟದಿಂದ ಕೊಂಚ ಪರಿಹಾರ ಸಿಗಲಿದೆ. ಈಗ ತುಲಾ ರಾಶಿಯವರಿಗೆ ಪಂಚಮ ಶನಿ ಶುರುವಾಗಿದೆ. ಸ್ವಲ್ಪ ಆತಂಕ ಪಡುವಂತಹ ವಿಚಾರ ಇದಾಗಿದೆ. ಹಾಗಂತ ಭಯಪಡುವ ಅವಶ್ಯಕತೆ ಇಲ್ಲ.
ನಿಮ್ಮ ಬದುಕಿನಲ್ಲಿ ಕಷ್ಟವನ್ನು ಕೊಟ್ಟು ಬದಲಾವಣೆ ತರುವ ಉದ್ದೇಶ ಪಂಚಮ ಶನಿಯದ್ದಾಗಿರುತ್ತದೆ. ಹೀಗಾಗಿ ಈ ವರ್ಷ ತುಲಾ ರಾಶಿಯವರಿಗೆ ಕೊಂಚ ಕಷ್ಟಗಳು ಎದುರಾಗುತ್ತವೆ. ಆದರೆ ಶನಿ ಯಾವುದೇ ಸಮಸ್ಯೆ ಕೊಟ್ಟರೂ ಅದರಿಂದ ಪಾರಾಗಲು ಯುಗಾದಿ ನಂತರ ಗುರು ನಿಮ್ಮನ್ನು ಕಾಪಾಡುತ್ತಾನೆ. ಯಾವುದೇ ಸಮಸ್ಯೆಯಿಂದ ಹೊರ ಬರಲು ಗುರು ನಿಮಗೆ ದಾರಿಯನ್ನು ತೋರಿಸುತ್ತಾನೆ.
ತುಲಾ: ಆರ್ಥಿಕ ಜೀವನ
ಈ ವರ್ಷ ಯುಗಾದಿ ತುಲಾ ರಾಶಿಯವರಿಗೆ ಆರ್ಥಿಕವಾಗಿ ಮಿಶ್ರ ಫಲವನ್ನು ಕೊಡುತ್ತದೆ. ಕಷ್ಟಪಟ್ಟ ಹಣ ನಿಮಗೆ ಸಿಗುತ್ತದೆ. ಆದರೆ ಹಣಕಾಸಿನ ವಿಷಯದಲ್ಲಿ ಸ್ಪಲ್ಪ ಜಾಗರೂಕತೆಯಿಂದ ಇರಬೇಕು. ಯಾಕೆಂದರೆ ಗುರುವಿನ ಜೊತೆ ರಾಹು ಕೂಡ ಇರುವುದರಿಂದ ಯಾರಿಗೇ ದುಡ್ಡು ಕೊಟ್ಟರೂ ಹಣ ವಾಪಸ್ಸು ಬರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ತುಂಬಾ ವ್ಯವಸ್ಥೆ ಮಾಡಿಕೊಂಡಿರಬೇಕು.
ತುಲಾ ರಾಶಿಯವರು ಹಣಕಾಸಿನ ಸಮಸ್ಯೆ ಬರುವುದನ್ನು ತಪ್ಪಿಸಲು ಸಾಲ ಮಾಡಬೇಡಿ. ಸಾಲವನ್ನೂ ಕೊಡಬೇಡಿ. ಪಾಲುದಾರಿಕೆಯಲ್ಲಿ ಅತೀಯಾದ ನಂಬಿಕೆ ಬೇಡ. ಇದರಿಂದ ಮೋಸ ಹೋಗುವ ಸಾಧ್ಯತೆಗಳು ಇವೆ. ಹೀಗಾಗಿ ಈ ವರ್ಷದ ಯುಗಾದಿ ಫಲ ತುಲಾ ರಾಶಿಯವರಿಗೆ ಮಿಶ್ರಫಲವಾಗಿದೆ.
ತುಲಾ: ಶೈಕ್ಷಣಿಕ ಜೀವನ
ವಿದ್ಯಾಭ್ಯಾಸದಲ್ಲಿ ಶನಿಯು ಆಸಕ್ತಿಯನ್ನು ಕಸಿದುಕೊಳ್ಳುತ್ತಾನೆ. ಅಂದರೆ ಅಸಡ್ಡೆ ತೋರುವುದು, ಇಂದು ಮಾಡುವ ಕೆಲಸವನ್ನು ನಾಳೆ, ನಾಡಿದ್ದು ಹೀಗೆ ಮುಂದೂಡುವುದು, ಸೋಮಾರಿತನ ಉಂಟು ಮಾಡುತ್ತಾನೆ. ಆದರೆ ಗುರು ಶನಿ ಪ್ರಭಾವನನ್‌ಉ ವಿದ್ಯಾರ್ಥಿಗಳ ಮೇಲೆ ಕಡಿಮೆ ಮಾಡುತ್ತಾನೆ. ಶನಿ ತರುವ ಸಮಸ್ಯೆಗಳಿಂದ ಮುಕ್ತಿ ನೀಡುತ್ತಾನೆ.
ಓದಲು ಬೇಸರ, ಆಸಕ್ತಿ ತೋರದ ತುಲಾ ರಾಶಿಯ ವಿದ್ಯಾರ್ಥಿಗಳ ಮೇಲೆ ಗುರು ಬಲವಿದ್ದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದರೆ ಪೋಷಕರು ಮಕ್ಕಳನ್ನು ವಿದ್ಯಾಭ್ಯಾಸದತ್ತ ಗಮನ ಹರಿಸಲು ಪ್ರಯತ್ನಿಸಬೇಕು. ಅವರ ಬಗ್ಗೆ ಕಾಳಜಿ ತೋರಬೇಕು. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಕೇಲವ ಕನಸು ಕಂಡರೆ ಆಗುವುದಿಲ್ಲ. ಅದಕ್ಕೆ ತಕ್ಕಂತೆ ಶ್ರಮವನ್ನೂ ವಹಿಸಬೇಕಾಗುತ್ತದೆ.
ತುಲಾ: ಪ್ರೇಮ ಜೀವನ
ಯುಗಾದಿ ನಮಥರ ತುಲಾ ರಾಶಿವರಿಗೆ ಮದುವೆ ಯೋಗ ಬರಲಿದೆ. ಅಂದುಕೊಂಡಂತ ಸಂಗಾತಿ ಸಿಗುವಳು. ಜಾಕತದಲ್ಲಿ ದೋಷ, ಹೊಂದಾಣಿಕೆ ಇಂತೆಲ್ಲಾ ಸಮಸ್ಯೆಗಳು ಈ ವರ್ಷ ದೂರವಾಗುತ್ತವೆ. ಹೊಸ ಚಿಗುರಿನಂತೆ ನಿಮ್ಮ ಜೀವನ ಚಿಗುರೊಡೆಯಲಿದೆ. ಬಾಳ ಸಂಗಾತಿಯ ಆಗಮನದಿಂದ ಮನೆಯಲ್ಲಿ ಸಂತೋಷ ವಾತಾವರಣ ಇರಲಿದೆ. ನೆಮ್ಮದಿಯ ಜೀವನ ನಿಮ್ಮದಾಗಲಿದೆ.
ಮಕ್ಕಳ ನಿರೀಕ್ಷೆಯಲ್ಲಿರುವವರಿಗೆ ಯುಗಾದಿ ನಂತರ ಉತ್ತಮ ಸಮಯ ಬರಲಿದೆ. ವಿವಾಹಿತರಿಗೆ ಸಂತಾನ ಭಾಗ್ಯ ಸಿಗಲಿದೆ. ನವೆಂಬರ್ ಬಳಿಕ ನಿಮ್ಮ ಆಸೆಗಳು ಈಡೇರುತ್ತವೆ. ಪುತ್ರ ಪ್ರಾಪ್ತಿಯಾಗುವ ಸಾಧ್ಯತೆಗಳು ಇವೆ.
ತುಲಾ: ಆಸ್ತಿ ಖರೀದಿ
ತುಲಾರಾಶಿಯವರಿಗೆ ಆರ್ಥಿಕವಾಗಿ ಶನಿಯಿಂದ ತುಂಬಾ ಸಮಸ್ಯೆಗಳನ್ನು ಉಂಟಾಗುವುದಿಲ್ಲ. ಒಂದು ವೇಳೆ ಮಾಡಿದರೂ ಗುರು ದೃಷ್ಟಿ ನಿಮ್ಮ ಮೇಲಿರುವುದರಿಂದ ಬೆಟ್ಟದಂತೆ ಬಂದ ಕಷ್ಟ ಮಂಜಿನಂತೆ ಗುರು ನಿವಾರಣೆ ಮಾಡುತ್ತಾನೆ. ಸಮಸ್ಯೆ ಬಂದರೂ ನಿವಾರಣೆ ಆಗುತ್ತದೆ.
ನವೆಂಬರ ಕಳೆದ ನಂತರ ತುಲಾ ರಾಶಿಯವರಿಗೆ ತುಂಬಾ ಒಳ್ಳೆದು. ಎಲ್ಲಾ ಸಮಸ್ಯಗಳಿಂದ ನೀವು ದೂರವಾಗುತ್ತೀರಿ. ಆರ್ಥಿಕ ಅಭಿವೃದ್ಧಿ ಸಿಗಲಿದೆ. ಕೆಲಸದ ವಿಚಾರದಲ್ಲಿ ದಿಡೀರ್ ಯಶಸ್ಸು ಸಿಗಲಿದೆ. ಆರು ತಿಂಗಳು ಎಲ್ಲಾ ತರಹದಲ್ಲೂ ಒದ್ದಾಟ, ಕಿರಿಕಿರಿ ಇರುವ ಸಾಧ್ಯತೆ ಇದೆ. ಆದರೆ ನಂತರ ಇದೆಲ್ಲದರಿಂದಲೂ ಪರಿಹಾರ ಸಿಗಲಿದೆ.
ತುಲಾ: ಆರೋಗ್ಯ
ನಿಮ್ಮ ಆಹಾರ ಪದ್ಧತಿ ನಿಮ್ಮನ್ನು ಸದಾ ಕಾಪಾಡುತ್ತದೆ. ಆದರೂ ಗಟ್ಟಿ ಪದಾರ್ಥವನ್ನು ಸೇವಿಸುವುದನ್ನು ತಪ್ಪಿಸಿ. ಹೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು ಉತ್ತಮ ವೈದ್ಯರನ್ನು ಕಾಣುವುದರಿಂದ ಸಮಸ್ಯೆಗಳಿಗೆ ಕೊಂಚ ಪರಿಹಾರವನ್ನು ಕಂಡುಕೊಳ್ಳುತ್ತಾರೆ.
ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆಗಳಿವೆ. ನಿಮಗಿಂತಲೂ ಮಕ್ಕಳ ಬಗ್ಗೆ ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಲಾಗುತ್ತದೆ. ಇದರಿಂದ ನಿಮ್ಮ ಕುಟುಂಬ ಆರೋಗ್ಯವಾಗಿರುತ್ತದೆ. ರಾಹು ಹಾಗೂ ಶನಿಗೆ ಪರಿಹಾರವನ್ನು ಮಾಡಿಕೊಳ್ಳುವುದು ಉತ್ತಮ.
ಪರಿಹಾರ
* ಪ್ರತೀ ಶನಿವಾರ ಉದ್ದಿನ ಬೇಳೆ, ಹುರಳಿ ಕಾಳು ಹಾಗೂ ಕಪ್ಪು ಎಳ್ಳು ದಕ್ಷಿಣ ಸಮೇತವಾಗಿ ದೇವಸ್ಥಾನಕ್ಕೆ ಕೊಡಿ
* ಹನುಮಾನ್ ಚಾಲೀಸ್, ಗಣೇಶ ಹಾಗೂ ದುರ್ಗಾ ಸ್ತ್ರೋತ್ರವನ್ನು ಪ್ರತಿ ದಿನ ಪಠಿಸಿ.
*ವೃದ್ಧಾಶ್ರಮಕ್ಕೆ ಹೋಗಿ ಅವಶ್ಯಕ ಇರುವ ವಸ್ತು ದಾನ ಮಾಡಿ
* ಸಂಕಷ್ಟ ಚತುರ್ಥಿ ವ್ರತ ಮಾಡಿ
*ಅಗತ್ಯವಿರುವ ವಸ್ತುಗಳನ್ನು ಅಗತ್ಯ ಇರುವವರಿಗೆ ನೀಡಿ
* ದೇವಸ್ಥಾನದಲ್ಲಿ ಕರಿ ಎಳು ದ್ವೀಪವನ್ನು ಹಚ್ಚಿ
* ಅನಾಥಶರಿಗೆ ವಸ್ತ್ರ ದಾನ ಮಾಡಿ
* ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಿ
* ಶನಿವಾರ ತಪ್ಪದೇ ಹನುಮಾನ ಚಾಲೀಸ್ ಪಠಿಸಿ
* ವಯಸ್ಸಾದವರ ಸೇವೆ ಮಾಡಿ
* ದುರ್ಗಾ ದೇವಿ ಮಂತ್ರವನ್ನು ಹೇಳಿ