ಗಬ್ಬು ನಾರುತ್ತಿದೆ ರಾಷ್ಟ್ರೀಯ ಹೆದ್ದಾರಿ 207; ನಾಮಕಾವಸ್ಥೆಗಷ್ಟೇ ನಾಮಫಲಕ |Hosapete | | Bangalore |
ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಳೂರು ಹಾಗೂ ಕೆ.ಮಲ್ಲಸಂದ್ರ ಗ್ರಾಮಗಳು ಪ್ರಧಾನಿ ಮೋದಿ ಅವರ ಸ್ವಚ್ಚಭಾರತ್ ಪರಿಕಲ್ಪನೆಗೆ ಕಪ್ಪು ಚುಕ್ಕೆಯಾಗಿವೆ. ಏಕೆಂದರೆ ಈ ಗ್ರಾಮಗಳಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 207 ಚೆಲ್ಲಾಪಿಪ್ಪಿಯಾಗಿ ಬಿದ್ದಿರುವ ಗಬ್ಬುನಾರುವ ಕಸದ ರಾಶಿಯಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಕಸ ಬಿಸಾಡುವುದರಲ್ಲಿ ಸಾರ್ವಜನಿಕರ ಪಾತ್ರಕ್ಕಿಂತ ನಗರ ಭಾಗದ ಹೋಟೆಲ್, ರೆಸ್ಟೋರೆಂಟ್, ಮಾಂಸÀದಂಗಡಿಗಳ ತ್ಯಾಜ್ಯವೇ ಹೆಚ್ಚಾಗಿದ್ದು ಇದನ್ನು ತಿನ್ನಲು ಬೀದಿ ನಾಯಿಗಳು ಮುಗಿಬಿದ್ದು ಹೆದ್ದಾರಿಯ ಮದ್ಯಭಾಗಕ್ಕೆ ಎಳೆದು ತಂದು ಮಾಂಸದ ತುಂಡುಗಳನ್ನು ತಿನ್ನುವ ಭರದಲ್ಲಿ ರಸ್ತೆ ಬದಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಅಡ್ಡ ಬಂದು ವಾಹನ ಸವಾರರು ಬಿದ್ದು ಗಾಯಗೊಂಡಿರುವ ಸಾಕಷ್ಟು ನಿರ್ಶನಗಳು ಸಹ ನಡೆದಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ನಾಮಕಾವಸ್ಥೆಗಷ್ಟೇ ನಾಮಫಲಕಗಳನ್ನು ಅಳವಡಿಸಿ ದಂಡವಿಧಿಸುವುದಾಗಿ ಬರೆದಿದ್ದರೂ ಕಾನೂನುಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ.