ಹೆಣ್ಮಕ್ಕಳ ದಂಧೆಗಿಳಿದ ವ್ಯಕ್ತಿ ಅರೆಸ್ಟ್
ಈ ಆಯಪ್ ನ್ನು ಬಳಸಿಕೊಂಡು ಸುಲಿಗೆ ಮಾಡ್ತಿದ್ದ ಮಂಜುನಾಥ್ 2019 ರರಲ್ಲಿ ಬಿಡುಗಡೆಯಾಗಿದ್ದ ನ್ಯೂರಾನ್ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದ ಎಂದು ಹೇಳಲಾಗಿತ್ತು. ಆದರೆ ಅಸಲಿಗೆ ಈ ವ್ಯಕ್ತಿಗೂ ಸಿನಿಮಾಗೂ ಸಂಬಂಧವೇ ಇಲ್ಲ ಎನ್ನಲಾಗಿದೆ.
ಸೈಕೋಲಾಜಿ ಸಂಬಂಧಪಟ್ಟಂತಹ ಚಿತ್ರ ಕನ್ನಡದಲ್ಲಿ ರಿಲೀಸ್ ಆಗಿತ್ತು. ಮಂಜುನಾಥ್ ನ್ಯೂರಾನ್ ಎಂಬ ಚಿತ್ರದಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಸು ಗೆದ್ದಿದ್ದರು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು ನ್ಯೂರಾನ್ ಎಂಬ ಸೈಕೋಲಾಜಿ ಚಿತ್ರದಲ್ಲಿ ನಾಯಕನಾಗಿದ್ದ ವ್ಯಕ್ತಿ ಅರೆಸ್ಟ್ ಆಗಿರುವ ಮಂಜುನಾಥ್ ಅಲ್ಲ ಎಂದು ತಿಳಿದುಬಂದಿದೆ.ಮಂಜುನಾಥ್ ಅಥವಾ ಸಂಜು ಲೊಕ್ಯಾಂಟೋದಲ್ಲಿ ಹುಡುಗಿಯರ ಫೋಟೋ ಬಳಸಿ ಗ್ರಾಹಕರನ್ನ ಸೆಳೆದು ಸುಲಿಗೆ ಮಾಡುವುದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದ.
ಅನ್ ಲೈನ್ ಮೂಲಕ ಹಣ ಪೀಕುತ್ತಿದ್ದ ಸಂಜು ಅಂಡ್ ಗ್ಯಾಂಗ್ ಕುರಿತು ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ತನಿಖೆಗಿಳಿದ ಪೊಲೀಸರು ಮಂಜುನಾಥ್ ಸೇರಿ ಆರು ಜನರನ್ನ ಬಂಧಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.