ಭಾಜಾ ಭಜಂತ್ರಿ ಭಾರಿಸುವವರಿಗೆ ಅವಕಾಶ ನಿರಾಕರಣೆ ಖಂಡನೀಯ | Shiggoan |

ಗಣೇಶೋತ್ಸವ ಹಾಗೂ ಇತರೆ ಹಬ್ಬ-ಹರಿದಿನಗಳು ಸೇರಿದಂತೆ ಶುಭಕಾರ್ಯಗಳಲ್ಲಿ ಮಾತ್ರ ಕೆಲಸಮಾಡುವ ಭಾಜ ಭಜಂತ್ರಿಗಳಿಗೆ ಕೋರೋನಾ ರೂಲ್ಸ್ ಅನ್ವಯ ಮಾಡಿರುವುದು ಸರಿಯಲ್ಲ ಎಂದು ಸರ್ಕಾರದ ನೀತಿಯನ್ನು ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ತೀವ್ರವಾಗಿ ಖಂಡಿಸಿದ್ದಾರೆ. ಶಿಗ್ಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಕೋರೋನಾ ಅಲೆಯಲ್ಲಿ ಬೆಂದು ಬಡವವಾಗಿರುವ ಭಜಂತ್ರಿಯವರಿಗೆ ಹೊಟ್ಟೆ ಮೇಲೆ ಬರೆ ಎಳೆದಂತೆ ಮುಖ್ಯಮಂತ್ರಿಗಳು ರೂಲ್ಸ್ ಹಾಕಿರುವುದು ಎಷ್ಟು ಸರಿ? ಕೊರೋನಾ ರೂಲ್ಸ್ ನೆಪಮಾಡಿಕೊಂಡು ಯಾವುದೇ ಶಬ್ದ ಹಾಗೂ ಪರಿಸರ ಮಾಲಿನ್ಯ ಮಾಡದೆ ವಾದ್ಯಗಳನ್ನು ಬಾರಿಸುವ ಬಾಜಾಭಜಂತ್ರಿಗಳಿಗೆ ಗಣೇಶ ಹಬ್ಬದಲ್ಲಿ ಅವಕಾಶ ಮಾಡದಿರುವುದು ಸಮಂಜಸವಲ್ಲ ಈಗಾಗಲೇ ಎರಡು ವರ್ಷಗಳಿಂದ ತೊಂದರೆ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಬಾಜಾ ಬಜಂತ್ರಿಗಳಿಗೆ ಗಣೇಶ ಹಬ್ಬ ಹಾಗೂ ಇತರ ಹಬ್ಬಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಪಡಿಸಿದರು.