ರೈತರಿಗೆ ಸಿಎಂ ಬೊಮ್ಮಾಯಿ ಬಂಪರ್ ಗಿಫ್ಟ್ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ

ರೈತರಿಗೆ ಸಿಎಂ ಬೊಮ್ಮಾಯಿ ಬಂಪರ್ ಗಿಫ್ಟ್  5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಎರಡನೇ ಬಜೆಟ್   ಅನ್ನು ಮಂಡಿಸುತ್ತಿದ್ದಾರೆ.ಬಜೆಟ್ ಗಾತ್ರ 3 ಲಕ್ಷ 7 ಸಾವಿರ ಕೋಟಿ ರೂ.ಇದ್ದು, ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಟ್ ಮಂಡಿಸಲಾಗುತ್ತಿದೆ.

ಈ ಬಜೆಟ್ ಮುಂದಿನ 25 ವರ್ಷ ದೂರದೃಷ್ಟಿ ಹೊಂದಿದೆ. ಈ ಬಜೆಟ್ ಉತ್ತಮ ಬದುಕಿನ ಭರವಸೆಯಾಗಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು.

ಮೊದಲು 3 ಲಕ್ಷ ರೂ.ವರೆಗೆ ಇದ್ದ ಸಾಲವನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.