ರಥೋತ್ಸವದ ವೇಳೆ ರಥ ಮಗುಚಿ ಬಿದ್ದ ವೀರಭದ್ರ ಸ್ವಾಮಿ ರಥ

ರಥೋತ್ಸವದ ವೇಳೆ ರಥ ಮಗುಚಿ ಬಿದ್ದ ವೀರಭದ್ರ ಸ್ವಾಮಿ ರಥ

ಕೊಳ್ಳೇಗಾಲ : ಚಾಮರಾಜನಗರ ತಾಲೂಕಿನ ಅಮಚವಾಡಿ ಸಮೀಪದ ಚನ್ನಪ್ಪನಪುರದ ವೀರಭದ್ರ ಸ್ವಾಮಿ ರಥೋತ್ಸವದ ವೇಳೆ ರಥ ಮಗುಚಿ ಬಿದ್ದಿದ್ದು ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಇಂದು ಚೆನ್ನಪ್ಪನ ಪುರದ ಬೆಟ್ಟದ ಮೇಲಿರುವ ವೀರಭದ್ರ ಸ್ವಾಮಿ ರಥೋತ್ಸವ ಸಾವಿರಾರು ಜನರ ಹರ್ಷೋದ್ಗಾರದ ನಡುವೆ ನಡೆಯುತ್ತಿತ್ತು.

ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು ಎರಡರಿಂದ ಮೂರು ಸಾವಿರ ಜನ ಸೇರಿದ್ದರು. ಈ ವೇಳೆ ಭಕ್ತರು ರಥವನ್ನು ಹೇಳುತ್ತಿದ್ದ ಸಂದರ್ಭದಲ್ಲಿ ಪ್ರಥದ ಮರ ಒಂದು ಸಟಿಲಗೊಂಡು ಮುಂಭಾಗಕ್ಕೆ ಬಾಗಲು ಶುರುವಾಗಿದೆ.

ರಥ ಮುಂದಕ್ಕೆ ಬಾಗುತ್ತಿರುವುದನ್ನು ಹರಿತ ಜನ ಅತ್ತ ಇತ್ತ ಓಡಿದ್ದಾರೆ ನೀವೇ ಹೇಳಿ ರಥ ಮುಂದಡಿಯಾಗಿ ಮುಗುಚಿ ಬಿದ್ದಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ರಥ ಮಗುಚಿ ಬಿದ್ದ ಪರಿಣಾಮ ಜನರಲ್ಲಿ ಆತಂಕ ಭಯ ಮನೆ ಮಾಡಿದೆ.

ಮುಜರಾಯಿ ಇಲಾಖೆಗೆ ಸೇರಿದ ಚಾಮರಾಜನಗರ ತಾಲೂಕಿನ ಚನ್ನಪ್ಪನ ಪುರದ ವೀರಭದ್ರ ಸ್ವಾಮಿ ರಥೋತ್ಸವ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆಯುತ್ತದೆ. ಅದರಂತೆ ಈ ಬಾರಿಯೂ ಸಹ ದೇವಸ್ಥಾನದಲ್ಲಿ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ಆದರೆ ರಥೋತ್ಸವದ ವೇಳೆ ಈ ಅವಘಡ ಸಂಭವಿಸಿದೆ.