ಚಿರತೆ ದಾಳಿಗೆ ಮೂರನೇ ಬಲಿ; ಮನೆ ಬಳಿಯೇ ಮಹಿಳೆಯ ಸಾವು..
ಮೈಸೂರು: ರಾಜ್ಯದಲ್ಲಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿರುವ, ಸಾಕುಪ್ರಾಣಿಗಳು ಹಾಗೂ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ಚಿರತೆ ದಾಳಿಗೆ ಮತ್ತೊಬ್ಬರು ಸಾವಿಗೀಡಾಗಿದ್ದಾರೆ.
ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಈ ಘಟನೆ ನಡೆದಿದೆ.
ಸಿದ್ದಮ್ಮ ಮನೆಯ ಆಚೆಗೆ ಇದ್ದ ಸೌದೆ ತೆಗೆದುಕೊಳ್ಳಲು ಹೋಗಿದ್ದಾಗ ಚಿರತೆ ದಾಳಿ ನಡೆಸಿದೆ. ಸಿದ್ದಮ್ಮ ಮೇಲೆರಗಿದ ಚಿರತೆ ಆಕೆಯನ್ನು ಒಂದಷ್ಟು ದೂರ ಎಳೆದೊಯ್ದಿದ್ದು, ಅದನ್ನು ನೋಡಿದ ಗ್ರಾಮಸ್ಥರು ಜೋರಾಗಿ ಕಿರುಚಾಡಿದ್ದರಿಂದ ಚಿರತೆ ಆಕೆಯ ದೇಹವನ್ನು ಬಿಟ್ಟು ಓಡಿಹೋಗಿದೆ. ಸಿದ್ದಮ್ಮ ಸಾವಿಗೀಡಾದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ನಡೆದು ಗಂಟೆಗಳು ಕಳೆದರೂ ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.