ದಂಡ' ಪಾವತಿಗೆ ಶೇ.50ರಷ್ಟು ವಿನಾಯಿತಿ : 7ನೇ ದಿನ ದಾಖಲೆಯ 12.36 ಕೋಟಿ ಸಂಗ್ರಹ

ದಂಡ' ಪಾವತಿಗೆ ಶೇ.50ರಷ್ಟು ವಿನಾಯಿತಿ : 7ನೇ ದಿನ ದಾಖಲೆಯ 12.36 ಕೋಟಿ ಸಂಗ್ರಹ

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಮೊತ್ತ ಸಂಗ್ರಹ ಪ್ರಕ್ರಿಯೆ ಭರ್ಜರಿಯಾಗಿ ನಡೆಯುತ್ತಿದ್ದು, ದಾಖಲೆಯ .12.36 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ.

ದಂಡ ಪಾವತಿಗೆ ಶೇ.50ರಷ್ಟುವಿನಾಯಿತಿ ನೀಡಿದ ಹಿನ್ನೆಲೆ ಬೆಂಗಳೂರಿನಲ್ಲಿ ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ , ಗುರುವಾರ 4.84 ಲಕ್ಷ ಪ್ರಕರಣಗಳಿಂದ ದಾಖಲೆಯ .12.36 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ.

ಇದರೊಂದಿಗೆ ಕಳೆದ ಏಳು ದಿನಗಳಲ್ಲಿ 23.73 ಲಕ್ಷ ಪ್ರಕರಣಗಳಿಂದ ಒಟ್ಟು .65.93 ಕೋಟಿ ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಾಕಿ ದಂಡ ಪಾವತಿಗೆ ಶೇ.50ರಷ್ಟುವಿನಾಯಿತಿ ಸೌಲಭ್ಯ ಶುಕ್ರವಾರ ಮತ್ತು ಶನಿವಾರ ಮಾತ್ರ ಇರಲಿದೆ. ಈ ಎರಡೂ ದಿನ ಬಾಕಿ ದಂಡ ಪಾವತಿಸುವವರ ಸಂಖ್ಯೆ ಮತ್ತಷ್ಟುಹೆಚ್ಚಾಗುವ ಸಾಧ್ಯತೆಯಿದೆ.

ಏಳನೇ ದಿನ 2373852 ಪ್ರಕರಣಗಳಿಂದ 12 ಕೋಟಿ 36 ಲಕ್ಷದ 25 ಸಾವಿರದ 450 ರೂ ದಂಡ ಸಂಗ್ರಹವಾಗಿದೆ. ಇದರಲ್ಲಿ ಪಿಡಿಎ ಮೂಕದ 251623 ಕೇಸ್ ಗಳಲ್ಲಿ 5 ಕೋಟಿ 99 ಲಕ್ಷದ 20 ಸಾವಿರದ 900 ರೂ ದಂಡ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ಇನ್ನೂ, ಪೇಟಿಎಂ ಮೂಲಕ 149672 ಕೇಸ್ ಗಳಲ್ಲಿ 4 ಕೋಟಿ 24 ಲಕ್ಷದ 45 ಸಾವಿರದ 650 ರೂ ಕಲೆಕ್ಷನ್ ಆಗಿದೆ. ಬೆಂಗಳೂರು ಒನ್ ವೆಬ್ಪೋರ್ಟಲ್ನಲ್ಲಿ 82 ಸಾವಿರ ಪ್ರಕರಣಗಳಿಂದ .2.11 ಕೋಟಿ ಸೇರಿದಂತೆ ಒಟ್ಟು .12.36 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.